ಬೆಂಗಳೂರು: ಮಾರ್ಚ್ ತಿಂಗಳಲ್ಲಿ ಪರೀಕ್ಷೆಯ ಟೆನ್ಮನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿಸುದ್ದಿ. ಈ ತಿಂಗಳಲ್ಲೂ ಸಾಲು ಸಾಲು ರಜೆಗಳು ಇವೆ.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಚ್ 13 ಅಥವಾ 14ರಂದು ರಾಜ್ಯದ ಕೆಲ ಶಾಲೆಗಳಿಗೆ ರಜೆ ಇರುತ್ತದೆ. ಮಾರ್ಚ್ 30ರಂದು ಯುಗಾದಿ. ಅಂದೂ ಹೇಗೂ ಭಾನುವಾರವಾಗಿದ್ದರಿಂದ ರಜೆ ಇದ್ದೇ ಇರುತ್ತದೆ.
ಮರುದಿನ ಮಾರ್ಚ್ 31 ರಂದು ಮುಸ್ಲಿಮರ ಉಪವಾಸ ಕೊನೆಗೊಳ್ಳುವ ದಿನ. ಅಂದು ಈದ್ ಅಲ್ ಫಿತರ್ ಹಿನ್ನೆಲೆಯಲ್ಲಿ ಅಂದು ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.