ಚಿತ್ರದುರ್ಗ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೊಡಮಾಡುವ 2025-26 ನೇ ಸಾಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪ್ರೌಢಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತಲಾ 06 ಶಿಕ್ಷಕರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ಜಿಲ್ಲೆಯ 11 ಶಿಕ್ಷಕರು ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ ಈ ಕೆಳಕಂಡಂತಿದೆ.
ಪ್ರೌಢಶಾಲಾ ವಿಭಾಗ :
ಹೊಸದುರ್ಗ ತಾಲ್ಲೂಕು ಮೆಂಗಸಂದ್ರದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಎಸ್, ಮೊಳಕಾಲ್ಮೂರು ತಾಲ್ಲೂಕು ರಾಂಪುರದ ಎಸ್‍ಪಿಎಸ್‍ಆರ್ ಸಂಯುಕ್ತ ಪ.ಪೂ. ಕಾಲೇಜು ಸಹ ಶಿಕ್ಷಕಿ ಡಿ. ಪಾರ್ವತಮ್ಮ, ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿಯ ಪ.ಪೂ. ಕಾಲೇಜು ಸಹಶಿಕ್ಷಕ ಸಿ.ಎಸ್. ಹರೀಶ್, ಹಿರಿಯೂರು ತಾಲ್ಲೂಕು ವೇಣುಕಲ್ಲುಗಡ್ಡದ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ರಂಗಸ್ವಾಮಿ ಎಸ್, ಚಿತ್ರದುರ್ಗ ತಾಲ್ಲೂಕು ಮಾಡನಾಯಕನಹಳ್ಳಿಯ ಪಟೇಲ್ ಬಸಣ್ಣ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ. ಶ್ರೀನಿವಾಸ್ ಹಾಗೂ ಚಳ್ಳಕೆರೆ ತಾಲ್ಲೂಕು ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಎಸ್. ರವಿಚಂದ್ರ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ :
ಮೊಳಕಾಲ್ಮೂರು ತಾಲ್ಲೂಕು ಬೊಮ್ಮಲಿಂಗನಹಳ್ಳಿ ಸರ್ಕಾರಿ ಹಿ.ಪ್ರಾ. ಶಾಲೆಯ ಸಹಶಿಕ್ಷಕ ಮಲ್ಲಿಕಾರ್ಜುನ ಪಿ.ಎನ್., ಚಳ್ಳಕೆರೆ ತಾಲ್ಲೂಕು ಚಿಕ್ಕಮ್ಮನಹಳ್ಳಿಯ ಸರ್ಕಾರಿ ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಕೆ.ಹೆಚ್. ಜಗನ್ನಾಥ, ಚಿತ್ರದುರ್ಗ ತಾಲ್ಲೂಕು ಮಲ್ಲಾಪುರದ ಸರ್ಕಾರಿ ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಕೆ.ಓ. ರತ್ನಮ್ಮ, ಚಳ್ಳಕೆರೆ ತಾಲ್ಲೂಕು ಭರಮಸಾಗರದ ಸರ್ಕಾರಿ ಹಿ.ಪ್ರಾ. ಶಾಲೆ ಸಹಶಿಕ್ಷಕಿ ತಿಪ್ಪಮ್ಮ ಎಸ್., ಹಿರಿಯೂರು ತಾಲ್ಲೂಕು ಹಿರಿಯೂರಿನ ಸರ್ಕಾರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಮ್ಮ ಹೆಚ್., ಹಾಗೂ ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿಯ ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಬಿ.ಹೆಚ್. ಗಾಯಿತ್ರಿ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗ :
ಚಳ್ಳಕೆರೆ ತಾಲ್ಲೂಕು ಜನ್ನೇನಹಳ್ಳಿ ಸರ್ಕಾರಿ ಕಿ.ಪ್ರಾ. ಶಾಲೆಯ ಸಹಶಿಕ್ಷಕಿ ಉಮಾದೇವಿ ಟಿ., ಚಳ್ಳಕೆರೆ ತಾಲ್ಲೂಕು ಗೋವರ್ಧನಗಿರಿ ಸ.ಕಿ.ಪ್ರಾ. ಶಾಲೆಯ ಸಹಶಿಕ್ಷಕ ರಾಮಚಂದ್ರಪ್ಪ ಜಿ., ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಸರ್ಕಾರಿ ಉರ್ದು ಕಿ.ಪ್ರಾ.ಶಾಲೆ ಸಹಶಿಕ್ಷಕಿ ಜಮ್‍ಶೀದ್ ಉನ್ನೀಸ, ಮೊಳಕಾಲ್ಮೂರು ತಾಲ್ಲುಕು ಗಾದಿಪಾಲಯ್ಯನಹಟ್ಟಿ ಸರ್ಕಾರಿ ಕಿ.ಪ್ರಾ.ಶಾ. ಸಹಶಿಕ್ಷಕ ಎಂ.ಟಿ. ಮಂಜುನಾಥ, ಹೊಸದುರ್ಗ ತಾಲ್ಲೂಕು ಹರೇನಹಳ್ಳಿ ಸ.ಕಿ.ಪ್ರಾ. ಶಾಲೆ ಸಹಶಿಕ್ಷಕ ಮಹಂತೇಶ್ ಎಂ.ಜೆ. ಹಾಗೂ ಹಿರಿಯೂರು ತಾಲ್ಲೂಕು ಕಿಲಾರದಹಳ್ಳಿ ಸರ್ಕಾರಿ ಕಿ.ಪ್ರಾ.ಶಾ. ಸಹಶಿಕ್ಷಕ ಮಲ್ಲಪ್ಪ ಡಿ.
ವಿಶೇಷ ಪ್ರಶಸ್ತಿ ವಿಭಾಗ :
ಚಿತ್ರದುರ್ಗದ ಚಿನ್ಮೂಲಾದ್ರಿ ರಾಷ್ಟ್ರೀಯ ಪ್ರೌಢಶಾಲೆಯ ಶಿಕ್ಷಕ ಶ್ರೀನಿವಾಸ್, ಹೊಸದುರ್ಗ ತಾಲ್ಲೂಕು ನಾಗತಿಹಳ್ಳಿಯ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಎಂ.ಎಸ್. ರಮೇಶ, ಹೊಸದುರ್ಗದ ಸರ್ಕಾರಿ ಪ.ಪೂ. ಕಾಲೇಜು ಸಹಶಿಕ್ಷಕ ಬಿ.ಕೆ. ಮಂಜುನಾಥ, ಹೊಳಲ್ಕೆರೆಯ ಸರ್ಕಾರಿ ಪ.ಪೂ. ಕಾಲೇಜಿನ ವೀರೇಶ್‍ಕುಮಾರ್, ಹಿರಿಯೂರು ತಾಲ್ಲೂಕು ಕೆರೆಕೋಡಿಹಳ್ಳಿ ಸ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ವೀರೇಶ ಕೆ., ಮೊಳಕಾಲ್ಮೂರು ತಾಲ್ಲೂಕು ರಾಂಪುರ ಬಸವೇಶ್ವರ ನಗರದ ಸ.ಹಿ.ಪ್ರಾ. ಶಾಲೆ ಸಹಶಿಕ್ಷಕ ಹಾಲೇಶಿ ನಾಯ್ಕ, ಚಳ್ಳಕೆರೆ ತಾಲ್ಲೂಕು ಕೆಂಚವೀರನಹಳ್ಳಿ ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ನಾಗರಾಜ ಬಿ.ಜಿ., ಓಬಳಾಪುರದ ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಮೃತ್ಯುಂಜಯ ಎನ್., ಚಿತ್ರದುರ್ಗ ತಾಲ್ಲೂಕು ಪಂಡರಹಳ್ಳಿ-2 ಸ.ಹಿ.ಪ್ರಾ. ಶಾಲೆ ಮುಖ್ಯಶಿಕ್ಷಕಿ ಎಸ್. ಲತಾ, ಹೊಸದುರ್ಗ ತಾಲ್ಲೂಕು ಕೊಂಡಾಪುರದ ಸ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ಆರ್. ಮಂಜುನಾಥ, ಹೊಳಲ್ಕೆರೆ ತಾಲ್ಲೂಕು ಆರ್. ನುಲೇನೂರು .ಕಿ.ಪ್ರಾ. ಶಾಲೆ ಸಹಶಿಕ್ಷಕಿ ಎಂ. ಇಂದ್ರಮ್ಮ.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ಪ್ರಶಸ್ತಿ ಪುರಸ್ಕøತರಿಗೆ ಸೆ. 05 ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಅವರು ತಿಳಿಸಿದ್ದಾರೆ.