ಮಧುಮೇಹ ನಿಯಂತ್ರಣ: ಹೂವಿನ ದಳಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಅಥವಾ ಹೂವಿನ ಕಷಾಯ (ಹಾಲು, ಬೆಲ್ಲ, ಶುಂಠಿಯೊಂದಿಗೆ) ಕುಡಿಯುವುದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಗಾಯ ಮತ್ತು ಬಾವು: ಎಲೆಗಳನ್ನು ಅರಸಿನ, ಉಪ್ಪು ಸೇರಿಸಿ ಅರೆದು ಗಾಯ, ವ್ರಣಗಳ ಮೇಲೆ ಲೇಪನ ಮಾಡುವುದರಿಂದ ಶೀಘ್ರ ಗುಣವಾಗುತ್ತದೆ.
ಜಂತುಹುಳು ನಿವಾರಣೆ: ಎಲೆಗಳ ಕಷಾಯ ಕುಡಿಯುವುದರಿಂದ ಹೊಟ್ಟೆಯಲ್ಲಿನ ಜಂತುಹುಳುಗಳು ಸಾಯುತ್ತವೆ.
ಮೂತ್ರದ ಸಮಸ್ಯೆಗಳು: ಹೂವಿನ ರಸವನ್ನು ಕಲ್ಲುಸಕ್ಕರೆಯೊಂದಿಗೆ ಸೇವಿಸುವುದರಿಂದ ಉರಿಮೂತ್ರ, ಅತಿಮೂತ್ರ ನಿಯಂತ್ರಣಕ್ಕೆ ಬರುತ್ತದೆ.
ಚರ್ಮದ ಸಮಸ್ಯೆಗಳು: ಪಾದ ಬಿರುಕು ಬಿಟ್ಟಾಗ ಎಲೆಗಳನ್ನು ಮಜ್ಜಿಗೆಯಲ್ಲಿ ಅರೆದು ಹಚ್ಚಿದರೆ ನೋವು ನಿವಾರಣೆಯಾಗಿ ಬೇಗನೆ ಕೂಡಿಕೊಳ್ಳುತ್ತದೆ. ತಲೆಹೊಟ್ಟು ನಿವಾರಣೆಗೆ ಹೂವಿನ ಪೇಸ್ಟ್‌ಗೆ ಕೊಬ್ಬರಿ ಎಣ್ಣೆ ಸೇರಿಸಿ ಹಚ್ಚಬಹುದು.
ಕೆಮ್ಮು, ನೆಗಡಿ ಮತ್ತು ಕಫ: ಚಿಕ್ಕ ಮಕ್ಕಳಿಗೆ ಕೆಮ್ಮು, ನೆಗಡಿಯಾದರೆ ಹೂವಿನ ದಳವನ್ನು ಹಾಲಿನಲ್ಲಿ ಹಾಕಿ ಕುಡಿಸುವುದು ಅಥವಾ ಹೂವಿನ ಕಷಾಯ ಕುಡಿಯುವುದು ಉಪಯುಕ್ತ.
ದೇಹ ತಂಪು ಮತ್ತು ಶಕ್ತಿ: ಹೂವಿನ ರಸ ಸೇವನೆಯಿಂದ ದೇಹ ತಂಪಾಗುತ್ತದೆ ಮತ್ತು ಆಲಸ್ಯ ದೂರವಾಗುತ್ತದೆ. ಧಾತು ವೃದ್ಧಿಗೆ ಹೂವಿನ ಮೊಗ್ಗುಗಳನ್ನು ಅರೆದು ಹಾಲು ಕುಡಿಯಬಹುದು.
ವಿಷ ನಿವಾರಣೆ: ಜೇನು ಹುಳು ಅಥವಾ ಚೇಳು ಕಚ್ಚಿದ ಜಾಗಕ್ಕೆ ಎಲೆಗಳ ರಸವನ್ನು ಲೇಪಿಸುವುದರಿಂದ ವಿಷದ ಪರಿಣಾಮ ಕಡಿಮೆಯಾಗುತ್ತದೆ.
ಕಷಾಯ: ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು.
ಲೇಪನ: ಎಲೆಗಳನ್ನು ಅರೆದು ಗಾಯಕ್ಕೆ ಹಚ್ಚುವುದು.
ಪುಡಿ: ತಂಗಡಿ ಬೀಜ, ಮೆಂತ್ಯಕಾಳು, ನೇರಳೆ ಬೀಜ ಪುಡಿ ಮಾಡಿ ಮಧುಮೇಹಕ್ಕೆ.
ಹೂವಿನ ದಳ: ಖಾಲಿ ಹೊಟ್ಟೆಯಲ್ಲಿ ದಿನನಿತ್ಯ ಸೇವನೆ.

































