ಅಹಮದಾಬಾದ್: ಗುರುವಾರ ಅಹಮದಾಬಾದ್-ಲಂಡನ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಅಪಘಾತಕ್ಕೀಡಾಗಿದ್ದು, ಭಾರಿ ದುರಂತ ಸಂಭವಿಸಿದೆ.
ವರದಿಗಳ ಪ್ರಕಾರ, ಈ ಘಟನೆ ಮಧ್ಯಾಹ್ನ 1 ರಿಂದ 2 ಗಂಟೆಯ ನಡುವೆ ಸಂಭವಿಸಿದೆ. 10 ಕ್ಯಾಬಿನ್ ಸಿಬ್ಬಂದಿ ಮತ್ತು 2 ಪೈಲಟ್ಗಳು ಸೇರಿದಂತೆ ಒಟ್ಟು 242 ಜನರು ವಿಮಾನದಲ್ಲಿದ್ದರು.
ಘಟನೆ ಸಂಬಂಧ ಸಹಾಯವಾಣಿ ತೆರೆಯಲಾಗಿದ್ದು, 1800 5691 444 ಗೆ ಸಂಪರ್ಕಿಸಬಹುದಾಗಿದೆ. ಮಾಧ್ಯಮ ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ ಏರ್ ಇಂಡಿಯಾದ ಮಾಧ್ಯಮ ಸಂಪರ್ಕ ಸಂಖ್ಯೆ +91 9821414954 ಅನ್ನು ಸಂಪರ್ಕಿಸಬಹುದು. ಏರ್ ಇಂಡಿಯಾ ಬೋಯಿಂಗ್ ಡ್ರೀಮ್ಲೈನರ್ 787 ವಿಮಾನವಾಗಿತ್ತು. ಇದು 300 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿತ್ತು. ಗ್ಯಾಟ್ವಿಕ್ಗೆ ಹೋಗುವ ವಿಮಾನವು ಬಹಳಷ್ಟು ಇಂಧನವನ್ನು ಹೊತ್ತೊಯ್ಯುತ್ತಿತ್ತು ಎಂದು ವರದಿಯಾಗಿದೆ. ಸಾವುನೋವುಗಳನ್ನು ನಿರೀಕ್ಷಿಸಲಾಗಿದೆ.