ನಿರಂತರವಾಗಿ ಸುರಿದ ಮುಂಗಾರು ಮಳೆ ಪ್ರಯುಕ್ತ ಈಗಾಗಲೇ ಶಾಲೆ-ಕಾಲೇಜುಗಳು ರಜೆ ಪಡೆದಿವೆ. ಇದೀಗ ಸಾಲು ಸಾಲು ಹಬ್ಬಗಳು ಎದುರಾಗಿವೆ. ಗಣೇಶ ಹಬ್ಬ ಮುಗಿಯುತ್ತಿದ್ದಂತೆ ದಸರಾ ಹಬ್ಬ 2025 ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ರಾಜ್ಯಗಳಲ್ಲಿ ಹಬ್ಬದ ರಜೆ ಘೋಷಣೆ ಆಗಿದೆ. ಕರ್ನಾಟಕದಲ್ಲಿ ದಸರಾ ಸೆಪ್ಟಂಬರ್ ಮೂರನೇ ವಾರದಿಂದ ಶುರುವಾಗಲಿದೆ.
ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. 2026 ಏಪ್ರಿಲ್ 11 ರಿಂದ 2026 ಮೇ 5ರ ವರೆಗೆ ಇನ್ನೂ ಬೇಸಿಗೆ ರಜೆ ನೀಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 123 ದಿನ ರಜೆ ಘೋಷಣೆ ಆಗಿದೆ. ಉಳಿದ ದಿನಗಳಲ್ಲಿ ಶಾಲೆಗಳು ತೆರೆಯಲಿವೆ. ಈ ಮಧ್ಯೆ ಭಾರೀ ಮಳೆಗೆ ಆಗಾಗ ಕೆಲವು ಜಿಲ್ಲೆಗಳಲ್ಲಿ ರಜೆ ನೀಡಲಾಗಿದೆ. ಅದನ್ನು ರಜಾ ದಿನಗಳಲ್ಲಿ ತರಗತಿ ನಡೆಸಿ ಪಠ್ಯಭ್ಯಾಸ ಸರಿಹೊಂದಿಸಲಾಗುತ್ತದೆ.