ಈ ಜಿಲ್ಲೆಯವರಿಗೆ ಗೃಹಲಕ್ಷ್ಮಿ ಹಣ ಜಮಾ ಇಲ್ಲಿದೆ ಮಾಹಿತಿ

WhatsApp
Telegram
Facebook
Twitter
LinkedIn

ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣ ಜಮಾ ಮಾಡೋದಕ್ಕೆ ಶುರು ಮಾಡಲಾಗಿದೆ. ಇಂದು ಲಕ್ಷಾಂತರ ಯಜಮಾನಿಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಬಾಕಿ ಇರುವಂತ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ನಾಳೆ ಅಥವಾ ನಾಡಿದ್ದು ಜಮಾ ಆಗಲಿದೆ.

ಹೌದು.. ರಾಜ್ಯದ ಯಜಮಾನಿ ಮಹಿಳೆಯರು ನಿರೀಕ್ಷೆ ಮಾಡುತ್ತಿದ್ದಂತ ಗೃಹ ಲಕ್ಷ್ಮೀ ಯೋಜನೆಯ ಬಾಕಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇಂದು ಅನೇಕ ಯಜಮಾನಿ ಮಹಿಳೆಯರಿಗೆ ರೂ.2000 ಬಾಕಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಈ ಜಿಲ್ಲೆಯವರಿಗೆ ಗೃಹಲಕ್ಷ್ಮಿ ಹಣ ಜಮಾ

ಗದಗ ಜಿಲ್ಲೆಯ ಗೃಹ ಲಕ್ಷ್ಮೀ ಯೋಜನೆಯಡಿ ಅಕ್ಟೋಬರ್ ಮತ್ತು ನವೆಂಬರ್ 2024 ರ ಮಾಹೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 2,48,525 ಅರ್ಜಿಗಳು ನೋಂದಣಿ, ಸ್ವೀಕೃಗೊಂಡಿದ್ದು ಆ ಪೈಕಿ 2,44,398 ಅರ್ಜಿಗಳು ಮಂಜೂರಾತಿ ಪಡೆದಿವೆ.

ತಾಲೂಕಾವಾರು ವಿವರ : ಗದಗ – 77,191 ಗಜೇಂದ್ರಗಡ – 26,057, ಲಕ್ಷ್ಮೇಶ್ವರ- 25,897, ಮುಂಡರಗಿ- 34,007, ನರಗುಂದ- 23,162, ರೋಣ- 35,625, ಶಿರಹಟ್ಟಿ- 22,459 ಅರ್ಜಿಗಳು ಮಂಜೂರಾಗಿವೆ.ಈ ಎಲ್ಲ ಫಲಾನುಭವಿಗಳಿಗೂ ಗೃಹ ಲಕ್ಷ್ಮೀ ಯೋಜನೆಯಡಿ ಅಕ್ಟೋಬರ್, ನವೆಂಬರ್ 2024 ರ ಮೊತ್ತ ಪಾವತಿಸಲಾಗಿದೆ ಎಂದು ತಾಲ್ಲೂಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ‌ ಮಂದಾಲಿ ತಿಳಿಸಿದ್ದಾರೆ

 

ನಿಮಗೆ ಗೃಹ ಲಕ್ಷ್ಮೀ ಯೋಜನೆ ಹಣ ( Gruhalkahsmi Scheme ) ಬಂದಿದ್ಯಾ ಅಂತ ಹೀಗೆ ಚೆಕ್ ಮಾಡಿ

ಹಂತ 1: ನಿಮ್ಮ ಪೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ, DBT Karnataka application ಅಂತ ಟೈಪ್ ಮಾಡಿ ಸರ್ಚ್ ಮಾಡಿ, ಡೌನ್ ಲೋಡ್ ಮಾಡಿಕೊಳ್ಳಿ.

ಹಂತ 2: ಫಲಾನುಭವಿಯ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ಹಂತ 3: ಆಗ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ಅದನ್ನು ನಮೂದಿಸಿ, ಗೆಟ್ ಓಟಿವಿ ನೀಡಿ, ಓಟಿಪಿ ಬಂದ ನಂತ್ರ, ವೆರಿಫೈ ಓಟಿಪಿಯ ಮೇಲೆ ಕ್ಲಿಕ್ ಮಾಡಿ.

ಹಂತ 4: ನಂತರ ಇಲ್ಲಿ ನೀವು ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ಹಂತ 5: ಈಗ ಹೋಂ ಪೇಜ್ ನಲ್ಲಿ ನೀವು Payment status ಮೇಲೆ ಕ್ಲಿಕ್ ಮಾಡಿ. ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಪಕ್ಕದಲ್ಲಿರುವ Seeding status of Adhaar in bank account ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಸೀಡಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಹಂತ 5: ಇಲ್ಲಿ ನಿಮಗೆ ಸರ್ಕಾರದಿಂದ ಜಮಾ ಆಗಿರುವಂತ ಗೃಹ ಲಕ್ಷ್ಮೀ ಯೋಜನೆಯ ಹಣ ವರ್ಗಾವಣೆಯಾಗಿರುವುದು ತಿಳಿಯಲಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon