ಇದುವರೆಗೂ ತಮ್ಮ ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಇಲ್ಲಿದೆ.!

WhatsApp
Telegram
Facebook
Twitter
LinkedIn

 

ಬೆಂಗಳೂರು:  ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 (ಅಧಿನಿಯಮ)ರ ಕಲಂ 22(1), ಕಲಂ 7ರ ಉಪ ಕಲಂ (1)ರಲ್ಲಿ ಉಲ್ಲೇಖಿಸಿರುವ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು 30ನೇ ಜೂನ್ಗಿಂತ ಮುಂಚಿತವಾಗಿ ಪ್ರತಿ ವರ್ಷವೂ ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ ನಿಗದಿತ ಅವಧಿಯೊಳಗೆ 2024-25 ನೇ ಸಾಲಿನ ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಲೋಕಾಯುಕ್ತದಿಂದ ಪ್ರಕಟಿಸಲಾಗಿದೆ.

ಈ ಆಸ್ತಿ ಮತ್ತು ದಾಯಿತ್ವ  ವಿವರಣಾ ಪಟ್ಟಿಯನ್ನು ಸಲ್ಲಿಸುವಲ್ಲಿ ವೈಫಲ್ಯತೆ ಉಂಟಾದಲ್ಲಿ, ಈ ಅಧಿನಿಯಮದಲ್ಲಿ ನಿಗದಿಪಡಿಸಿರುವಂತೆ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯ ಸಲ್ಲಿಸದಿರುವಿಕೆಯ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಲೋಕಾಯುಕ್ತರು ವರದಿ ಮಾಡಬೇಕೆಂದು ಅಧಿನಿಯಮದ ಕಲಂ 22(2)ರಲ್ಲಿ  ಅಧ್ಯಾದೇಶಿಸಲಾಗಿದೆ.

ಅದರಂತೆ ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಆ ವರದಿಯ ಪ್ರತಿಯನ್ನು ಕಳುಹಿಸುವುದೂ ಕೂಡಾ ಅವಶ್ಯಕವಾಗಿರುತ್ತದೆ. ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಅಧಿನಿಯಮದ ಕಲಂ 22(1) ರಲ್ಲಿರುವಂತೆ ಈ ವರದಿಯನ್ನು ಕಳುಹಿಸಿದ್ದಾಗಿಯೂ ಅಂತಹ ವರದಿಯನ್ನು ಕಳುಹಿಸಿದ ಎರಡು ತಿಂಗಳೊಳಗೆ ಸಂಬಂಧಪಟ್ಟ ಸಾರ್ವಜನಿಕ ನೌಕರರು ಅಧಿನಿಯಮದ ಕಲಂ 22(2) ಅನ್ನು ಪಾಲಿಸುವಲ್ಲಿ ವಿಫಲನಾದಲ್ಲಿ, ಲೋಕಾಯುಕ್ತರು ಅಂತಹ ತಪ್ಪಿತಸ್ಥ ಸಾರ್ವಜನಿಕ ನೌಕರರ ಹೆಸರುಗಳನ್ನು ರಾಜ್ಯದ ಪ್ರಚಲಿತವಾಗಿರುವ ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಬಹುದು.

ಅಧಿನಿಯಮದ ಕಲಂ 22ರಲ್ಲಿ ಉಲ್ಲೇಖಿಸಿರುವ ಸಾರ್ವಜನಿಕ ನೌಕರ ಎಂಬ ವ್ಯಾಖ್ಯಾನದ ಅಡಿಯಲ್ಲಿ ವಿಧಾನ ಸಭಾ ಮತ್ತು ವಿಧಾನ ಪರಿಷತ್ ಎಲ್ಲಾ ಸದಸ್ಯರೂ ಸೇರಿರುತ್ತಾರೆ. ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರುವ ದಿನಾಂಕ 28/08/2025 ರ ವರದಿಯ ಪ್ರತಿ ಈ ಸಾರ್ವಜನಿಕ ನೌಕರರಿಗೆ ಜಾರಿಯಾಗಿದ್ದಾಗ್ಯೂ, ಸಕ್ಷಮ ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸಿದ ಎರಡು ತಿಂಗಳುಗಳೊಳಗಾಗಿ ಸದರಿ ಸಾರ್ವಜನಿಕ ನೌಕರರು 2024-25ನೇ ಸಾಲಿನ ತಮ್ಮ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ಸಲ್ಲಿಸಲು ವಿಫಲರಾಗಿರುವುದರಿಂದ ಅವರ ಹೆಸರುಗಳನ್ನು ಅಧಿನಿಯಮದ ಕಲಂ 22ರ ಉಪ ಕಲಂ (2) ರಂತೆ ಈ ಮೂಲಕ ವೃತ್ತಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2024-25 ನೇ ಸಾಲಿನ ಸಂಬಂಧಿಸಿದ ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದಿರುವ  ಸಚಿವರ ಪಟ್ಟಿ:

*******************

ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಸಚಿವರಾದ ಬಿ.ಜಡ್. ಜಮೀರ್ ಅಹ್ಮದ್ ಖಾನ್, ಹಜ್ ಮತ್ತು ಪೌರಾಡಳಿತ ಸಚಿವರಾದ ರಹೀಮ್ ಖಾನ್, ಪಶು ಸಂಗೋಪನೆ ಮತ್ತು ರೇμÉ್ಮ ಸಚಿವರಾದ ಕೆ. ವೆಂಕಟೇಶ್,

ವಿಧಾನ ಸಭಾ ಸದಸ್ಯರ ಪಟ್ಟಿ:

************* ಕ್ಯಾತ್ಸಂದ್ರ ಎನ್ ರಾಜಣ್ಣ (ಮಧುಗಿರಿ), ಲಕ್ಷ್ಮಣ ಸಂಗಪ್ಪ ಸವದಿ (ಅಥಣಿ), ಅಶೋಕ ಮಹಾದೇವಪ್ಪ ಪಟ್ಟಣ್ (ರಾಮದುರ್ಗ), ಮೇಟಿ ಹುಲ್ಲಪ್ಪ  ಯಮನಪ್ಪ (ಬಾಗಲಕೋಟೆ), ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ (ಹುನಗುಂದ), ಕಟಕದೊಂಡ ವಿಠ್ಠಲ ದೊಂಡಿಬಾ  (ನಾಗಠಾಣ (ಪ.ಜಾ.)), ಎಂ. ವೈ. ಪಾಟೀಲ್ (ಅಫಜಲಪೂರ), ಅಲ್ಲಮಪ್ರಭು ಪಾಟೀಲ್ (ಕಲಬುರಗಿ ದಕ್ಷಿಣ), ಶ್ರೀಮತಿ ಕನೀಜ್ ಫಾತಿಮಾ (ಕಲಬುರಗಿ -ಉತ್ತರ), ಶರಣು ಸಲಗರ (ಬಸವಕಲ್ಯಾಣ), ಸಿದ್ದು ಪಾಟೀಲ್  (ಹುಮನಾಬಾದ್), ಬಸನಗೌಡ ತುರುವಿಹಾಳ (ಮಸ್ಕಿ (ಪ.ಪಂ.), ಜಿ. ಜನಾರ್ದನ ರೆಡ್ಡಿ (ಗಂಗಾವತಿ), ಬಸವರಾಜ್ ರಾಯರೆಡ್ಡಿ (ಯಲಬುರ್ಗಾ), ಕೆ. ರಾಘವೇಂದ್ರ ಬಸವರಾಜ ಹಿಟ್ನಾಳ್ (ಕೊಪ್ಪಳ), ಗುರುಪಾದಗೌಡ ಸಂಗನಗೌಡ ಪಾಟೀಲ್ (ರೋಣ), ಎನ್. ಹೆಚ್. ಕೋನರೆಡ್ಡಿ (ನವಲಗುಂದ), ವಿನಯ ಕುಲಕರ್ಣಿ  (ಧಾರವಾಡ), ಸತೀಶ್ ಕೃಷ್ಣ ಸೈಲ್ (ಕಾರವಾರ), ದಿನಕರ್ ಕೇಶವ ಶೆಟ್ಟಿ (ಕುಮಟಾ), ಬಸವರಾಜ ನೀಲಪ್ಪ ಶಿವಣ್ಣನವರ್ (ಬ್ಯಾಡಗಿ), ಜೆ ಎನ್ ಗಣೇಶ್ (ಕಂಪ್ಲಿ (ಪ.ಪಂ.), ಎನ್ ವೈ ಗೋಪಾಲಕೃಷ್ಣ (ಮೊಳಕಾಲ್ಮೂರು (ಪ.ಪಂ.), ಎಂ. ಚಂದ್ರಪ್ಪ (ಹೊಳಲ್ಕೆರೆ), ಲತಾ ಮಲ್ಲಿಕಾರ್ಜುನ (ಹರಪನಹಳ್ಳಿ), ಕೆ ಎಸ್ ಬಸವಂತಪ್ಪ (ಮಾಯಕೊಂಡ (ಪ.ಜಾ.), ಶಾರದಾ ಪೂರ್ಯಾರ   ನಾಯ್ಕ (ಶಿವಮೊಗ್ಗ ಗ್ರಾಮಾಂತರ (ಪ.ಜಾ.), ಬಿ ಕೆ ಸಂಗಮೇಶ್ವರ್ (ಭದ್ರಾವತಿ), ಟಿ ಡಿ ರಾಜೇಗೌಡ (ಶೃಂಗೇರಿ), ನಯನಾ ಮೊಟಮ್ಮ (ಮೂಡಿಗೆರೆ (ಪ.ಜಾ.), ಜಿ. ಹೆಚ್. ಶ್ರೀನಿವಾಸ (ತರೀಕೆರೆ), ಆನಂದ ಕೆ. ಎಸ್. (ಕಡೂರು), ಸಿ. ಬಿ. ಸುರೇಶ್ ಬಾಬು  (ಚಿಕ್ಕನಾಯಕನಹಳ್ಳಿ), ಡಾ. ಹೆಚ್. ಡಿ. ರಂಗನಾಥ್  (ಕುಣಿಗಲ್), ಬಿ. ಸುರೇಶ್ ಗೌಡ  (ತುಮಕೂರು ಗ್ರಾಮಾಂತರ), ಹೆಚ್.ವಿ. ವೆಂಕಟೇಶ್ (ಪಾವಗಡ(ಪ.ಜಾ), ಕೆ.ಹೆಚ್ ಪುಟ್ಟಸ್ವಾಮಿ ಗೌಡ (ಗೌರಿ ಬಿದನೂರು), ಎಸ್.ಎನ್.ಸುಬ್ಬಾರೆಡ್ಡಿ (ಚಿನ್ನಕಾಯಲಪಲ್ಲಿ) (ಬಾಗೇಪಲ್ಲಿ), ಬಿ.ಎನ್.ರವಿಕುಮಾರ್  (ಶಿಡ್ಲಘಟ್ಟ),

ಜಿ.ಕೆ.ವೆಂಕಟಶಿವ ರೆಡ್ಡಿ  (ಶ್ರೀನಿವಾಸಪುರ), ಸಮೃದ್ದಿ ವಿ ಮಂಜುನಾಥ್ (ಮುಳಬಾಗಿಲು(ಪ.ಜಾ), ರೂಪಕಲಾ ಎಂ  ಕೆಜಿಎಫ್ (ಪ.ಜಾ), ಕೆ.ವೈ.ನಂಜೇಗೌಡ  (ಮಾಲೂರು), ಕೆ. ಗೋಪಾಲಯ್ಯ  (ಮಹಾಲಕ್ಷ್ಮಿ ಲೇಔಟ್), ಎ.ಸಿ.ಶ್ರೀನಿವಾಸ (ಪುಲಕೇಶಿ ನಗರ (ಪ.ಜಾ), ಎನ್.ಎ.ಹ್ಯಾರಿಸ್ (ಶಾಂತಿನಗರ), ಬಿ. ಶಿವಣ್ಣ (ಆನೇಕಲ್(ಪ.ಜಾ), ಶ್ರೀನಿವಾಸಯ್ಯ ಎನ್  (ನೆಲಮಂಗಲ(ಪ.ಜಾ), ಹೆಚ್.ಸಿ.ಬಾಲಕೃಷ್ಣ (ಮಾಗಡಿ), ಸಿ.ಪಿ.ಯೋಗೇಶ್ವರ (ಚನ್ನಪಟ್ಟಣ), ಉದಯ ಕೆ.ಎಂ (ಮದ್ದೂರು), ದರ್ಶನ್ ಪುಟ್ಟಣ್ಣಯ್ಯ (ಮೇಲುಕೋಟೆ),  ರವಿಕುಮಾರ್ ಗೌಡ(ಗಣಿಗ)  (ಮಂಡ್ಯ), ಎ.ಬಿ.ರಮೇಶ್ ಬಂಡಿಸಿದ್ದೇಗೌಡ  (ಶ್ರೀರಂಗಪಟ್ಟಣ), ಸಿ.ಎನ್.ಬಾಲಕೃಷ್ಣ (ಶ್ರವಣಬೆಳಗೊಳ), ಹೆಚ್ ಕೆ ಸುರೇಶ್ (ಹುಲ್ಲಹಳ್ಳಿ ಸುರೇಶ್)  (ಬೇಲೂರು), ಹೆಚ್.ಡಿ ರೇವಣ್ಣ  (ಹೊಳೆನರಸೀಪುರ), ಎ. ಮಂಜು  (ಅರಕಲಗೂಡು),

ಸಿಮೆಂಟ್ ಮಂಜು (ಸಕಲೇಶಪುರ(ಪ.ಜಾ), ಡಾ. ಭರತ್ ಶೆಟ್ಟಿ ವೈ (ಮಂಗಳೂರು ನಗರ ಉತ್ತರ), ಭಾಗೀರಥಿ ಮುರುಳ್ಯ  (ಸುಳ್ಯ(ಪ.ಜಾ), ರವಿಶಂಕರ್ ಡಿ (ಕೃಷ್ಣರಾಜನಗರ), ಅನಿಲ್ ಚಿಕ್ಕಮಾದು (ಹೆಗ್ಗಡದೇವನಕೋಟೆ (ಪ.ಪಂ), ಕೆ.ಹರೀಶ್ ಗೌಡ (ಚಾಮರಾಜ), ಎಂ.ಆರ್ ಮಂಜುನಾಥ್  (ಹನೂರು), ಎ .ಆರ್. ಕೃಷ್ಣ ಮೂರ್ತಿ (ಕೊಳ್ಳೇಗಾಲ (ಪ.ಜಾ), ಸಿ. ಪುಟ್ಟರಂಗಶೆಟ್ಟಿ (ಚಾಮರಾಜನಗರ),

ವಿಧಾನ ಪರಿಷತ್ ಸದಸ್ಯರ ಪಟ್ಟಿ:

********** ಸಲೀಂ ಅಹಮದ್, ಅಡಗೂರು ಹೆಚ್ ವಿಶ್ವನಾಥ್, ಕೆ. ಅಬ್ದುಲ್ ಜಬ್ಬರ್, ಎಂ. ಎಲ್. ಅನೀಲ್ ಕುಮಾರ್, ಬಸನಗೌಡ ಬಾದರ್ಲಿ, ಗೋವಿಂದರಾಜು, ಐವನ್ ಡಿʼಸೋಜಾ, ಟಿ. ಎನ್. ಜವರಾಯಿ ಗೌಡ, ಸಿ. ಎನ್. ಮಂಜೇಗೌಡ, ಡಾ. ಎಂ.ಜಿ. ಮುಳೆ, ಎನ್ . ನಾಗರಾಜು (ಎಂ.ಟಿ.ಬಿ.), ನಸೀರ್ ಅಹ್ಮದ್, ಕೆ. ಎಸ್. ನವೀನ್, ಪ್ರದೀಪ್ ಶೆಟ್ಟರ್, ಪಿ.ಹೆಚ್. ಪೂಜಾರ್, ರಾಜೇಂದ್ರ ರಾಜಣ್ಣ, ರಾಮೋಜಿ ಗೌಡ, ಶಶೀಲ್ ಜಿ ನಮೋಶಿ, ಎಸ್.ವ್ಹಿ. ಸಂಕನೂರ, ಸುನೀಲ್ ವಲ್ಯಾಪುರ್, ಸುನೀಲ್ ಗೌಡ ಪಾಟೀಲ್, ಶರವಣ ಟಿ.ಎ, ವೈ. ಎಂ.  ಸತೀಶ್, ಸೂರಜ ರೇವಣ್ಣ, ಹೆಚ್. ಪಿ.ಸುಧಾಮ್ ದಾಸ್, ತಿಪ್ಪಣ್ಣಪ್ಪ ಕಮಕನೂರ, ಡಾ. ಡಿ. ತಿಮ್ಮಯ್ಯ, ಕೆ. ವಿವೇಕಾನಂದ

 

ನಿಗದಿತ ಕಾಲಾವಧಿ ಮುಗಿದ ನಂತರ ಆಸ್ತಿ ಮತ್ತು ದಾಯಿತ್ವ ಪಟ್ಟಿ ಸಲ್ಲಿಸಿದ ಸಚಿವರು,ಶಾಸಕರ ಪಟ್ಟಿ: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ ಸುಧಾಕರ್, ಬಿ ಎಂ ನಾಗರಾಜು (ಸಿರಗುಪ್ಪ (ಪ.ಪಂ.), ಎಂ. ಟಿ. ಕೃಷ್ಣಪ್ಪ (ತುರುವೇಕೆರೆ), ಪಠಾಣ್ ಯಾಸೀರ್ ಅಹ್ಮದ್ ಖಾನ್ (ಶಿಗ್ಗಾಂವ್) ಹಾಗೂ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ್ ಎಂ. ಗೌಡ  ಅವರು ನಿಗದಿತ ಕಾಲಾವಧಿ ಮುಗಿದ ನಂತರ ಆಸ್ತಿ ಮತ್ತು ದಾಯಿತ್ವ ವಿವರವನ್ನು ಒದಗಿಸಿದ ಪಟ್ಟಿಯಲ್ಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon