ಚಿತ್ರದುರ್ಗ : ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಕೆ.ಟಿ. ಅವರು ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಮುಖಂಡರಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ.
ಬಿಜೆಪಿ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಚಿತ್ರದುರ್ಗ ಜಿಲ್ಲಾ ಘಟಕಕ್ಕೆ ಎಂಟು ಜಿಲ್ಲಾ ಉಪಾಧ್ಯಕ್ಷರು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಂಟು ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಪ್ರಾತಿನಿಧ್ಯ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆಗಳನ್ನು ತಳಮಟ್ಟದಿಂದ ಚುರುಕುಗೊಳಿಸಲು ಈ ತಂಡಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಕೆ.ಟಿ. ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ಆರ್.ಗಿರೀಶ್ (ಮಾಧುರಿ), ಜಿ.ಎಚ್. ಮೋಹನ್, ಡಾ.ಮಂಜುನಾಥ್, ವೆಂಕಟೇಶ್ ಯಾದವ್. ಜಿಲ್ಲಾ ಉಪಾಧ್ಯಕ್ಷರಾಗಿ ಡಾ: ಸಿದ್ಧಾರ್ಥ ಗುಂಡಾರ್ಪಿ, ದ್ಯಾಮೇಗೌಡ ಹಿರಿಯೂರು, ರವಿಕುಮಾರ್ ಹೊಸದುರ್ಗ, ಶ್ರೀಮತಿ ಶೈಲಜಾ ರೆಡ್ಡಿ ಶ್ರೀನಿವಾಸ್ ಸೂರನಹಳ್ಳಿ ಚಳ್ಳಕೆರೆ, ಲಿಂಗರಾಜು ಜಿ.ಎನ್. ಚಿತ್ರದುರ್ಗ, ಮಂಜುನಾಥ್ ಉಪ್ಪಾರ್ ಹೊಸದುರ್ಗ ಶೈಲೇಶ್ ಕುಮಾರ್ ಹೊಳಲ್ಕೆರೆ. ಜಿಲ್ಲಾ ಕಾರ್ಯದರ್ಶಿಗಳಾಗಿ ವಿಶ್ವನಾಥ್ ಹಿರಿಯೂರು, ಪಾಲಯ್ಯ.ಆರ್ ಕಾಲುವೇಹಳ್ಳಿಬಸವರಾಜ ಅಲ್ಲಾಪುರ ಚಳ್ಳಕೆರೆ,ಚಂದ್ರಶೇಖರ್ ವಿ.ಎಸ್ ಚಿತ್ರದುರ್ಗ,ಜಗದೀಶ್ ಶ್ರೀರಾಂಪುರ ಹೊಸದುರ್ಗ,ಶ್ರೀಮತಿ ರಜನಿ ಲೇಪಾಕ್ಷಿ, ಶ್ರೀಮತಿ ರೇಖಾ ಚಿತ್ರದುರ್ಗ, ಕಿರಣ್ ಕೋಶಾಧ್ಯಕ್ಷರಾಗಿ ಪ್ರಸಾದ್ ಸಿ.ಎಸ್. (ಚಳ್ಳಕೆರೆ) ಚಿತ್ರದುರ್ಗ ಮಾಧ್ಯಮ ವಕ್ತಾರರಾಗಿ ನಾಗರಾಜ್ ಬೇದ್ರೆ ಮಾಧ್ಯಮ ಸಹ ವಕ್ತಾರರಾಗಿ ನವೀನ್ ಚಾಲುಕ್ಯರವರನ್ನು ನೇಮಕ ಮಾಡಲಾಗಿದೆ.
ಮಾದುರಿ ಗಿರೀಶ್ ಈವರೆಗೆ ಜಿಲ್ಲಾ ಖಜಾಂಚಿಯಾಗಿದ್ದರು. ವೆಂಕಟೇಶ್ ಯಾದವ್ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದರು. ಜಿ.ಎಚ್.ಮೋಹನ್ ಜಿಲ್ಲಾ ಕಾರ್ಯದರ್ಶಿ ಹಾಗೂ ಮಂಜುನಾಥ್ ಮೊಳಕಾಲ್ಮೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
































