ಹೋಟೆಲ್‌ಗಳಲ್ಲಿ ಸೇಫ್ಟಿ ಇರಬೇಕು, ಆದರೆ ಕೆಲವು ಕಡೆ ಗುಪ್ತ ಕ್ಯಾಮೆರಾಗಳು ಇರೋದು ಟ್ರಾವೆಲರ್ಸ್‌ಗೆ ದೊಡ್ಡ ತಲೆನೋವು ಆಗಿದೆ.
ದೊಡ್ಡ ಹೋಟೆಲ್‌ಗಳಲ್ಲಿ ರೂಲ್ಸ್ ಸ್ಟ್ರಿಕ್ಟ್ ಆಗಿರ್ತವೆ, ಆದ್ರೂ ಕೆಲವೊಮ್ಮೆ ಸ್ಟಾಫ್‌ಗಳೇ ಗುಪ್ತ ಕ್ಯಾಮೆರಾ ಇಟ್ಟಿರೋ ಕೇಸ್‌ಗಳು ನಡೆದಿದೆ. ಆಗಾಗ ಪ್ರಯಾಣ ಮಾಡೋರು ಹೋಟೆಲ್ ರೂಮ್‌ಗಳಲ್ಲಿ ಸೇಫ್ಟಿ ಬಗ್ಗೆ ಜಾಗ್ರತೆ ವಹಿಸೋದು ಇಂಪಾರ್ಟೆಂಟ್. ಅದಕ್ಕೆ ನಿಮ್ಮ ಮೊಬೈಲ್ ಫೋನ್ ಇದ್ರೆ ಸಾಕು. ಕ್ಯಾಮೆರಾ ಎಲ್ಲಿರಬಹುದು ಗೊತ್ತಾ ?
* ಬಾತ್‌ರೂಮ್, ಚೇಂಜಿಂಗ್ ಏರಿಯಾ: ವೆಂಟ್ಸ್, ಸ್ಮೋಕ್ ಡಿಟೆಕ್ಟರ್, ಲೈಟ್ ಫಿಕ್ಚರ್ಸ್, ಮಿರರ್ಸ್, ಟಾಯ್ಲೆಟ್ರಿಸ್, ಟಿಶ್ಯೂ ಬಾಕ್ಸ್, ಟವೆಲ್ ರಾಕ್ಸ್‌ನಲ್ಲಿ ಚೆಕ್ ಮಾಡಿ.
* ಎಲೆಕ್ಟ್ರಾನಿಕ್ ಗ್ಯಾಜೆಟ್ಸ್: ಯುಎಸ್‌ಬಿ ಚಾರ್ಜರ್ಸ್, ಪವರ್ ಸ್ಟ್ರಿಪ್ಸ್, ಅಡಾಪ್ಟರ್ಸ್, ಟಿವಿ ಸ್ಕ್ರೀನ್ಸ್, ಸ್ಪೀಕರ್ಸ್, ಏರ್ ಪ್ಯೂರಿಫೈಯರ್ಸ್‌ನಲ್ಲಿ ಚೆಕ್ ಮಾಡಿ.
* ಇತರೆ ಏರಿಯಾಗಳು: ಸೀಲಿಂಗ್ ಕಾರ್ನರ್ಸ್, ಎಲೆಕ್ಟ್ರಿಕಲ್ ಔಟ್ಲೆಟ್ಸ್, ಲೈಟ್ ಸ್ವಿಚ್ಸ್, ಏರ್ ವೆಂಟ್ಸ್, ವಾಲ್ ಕ್ಲಾಕ್ಸ್, ಟಿವಿ ಯೂನಿಟ್ಸ್‌ಗಳನ್ನು ಚೆಕ್ ಮಾಡಿ. ಕ್ಯಾಮೆರಾ ಕಂಡುಹಿಡಿಯೋದು ಹೇಗೆ ?
* ಲೈಟ್ ಆಫ್ ಮಾಡಿ, ಐಆರ್ ಲೈಟ್ ನೋಡಿ: ಲೈಟ್ಸ್ ಆಫ್ ಮಾಡಿ, ಕರ್ಟನ್ಸ್ ಕ್ಲೋಸ್ ಮಾಡಿ. ಮೊಬೈಲ್ ಕ್ಯಾಮೆರಾ ಆನ್ ಮಾಡಿ ರೂಮ್ ಸ್ಕ್ಯಾನ್ ಮಾಡಿ. ರೆಡ್, ಗ್ರೀನ್, ಬ್ಲಿಂಕಿಂಗ್ ಲೈಟ್ಸ್ ಇದ್ರೆ ಕ್ಯಾಮೆರಾ ಇರಬಹುದು.
* ಹಿಡನ್ ಕ್ಯಾಮೆರಾ ಡಿಟೆಕ್ಷನ್ ಆಪ್ ಬಳಸಿ: ಹಿಡನ್ ಕ್ಯಾಮೆರಾ ಡಿಟೆಕ್ಟರ್, ಗ್ಲಿಂಟ್ ಫೈಂಡರ್, ಫಿಂಗ್ ನೆಟ್‌ವರ್ಕ್ ಸ್ಕ್ಯಾನರ್‌ನಂತಹ ಆಪ್‌ಗಳನ್ನು ಬಳಸಿ.
* ಫೋನ್ ಫ್ಲ್ಯಾಶ್‌ಲೈಟ್ ಬಳಸಿ: ಸ್ಮೋಕ್ ಡಿಟೆಕ್ಟರ್, ಅಲಾರ್ಮ್ ಕ್ಲಾಕ್ಸ್, ಪಿಕ್ಚರ್ ಫ್ರೇಮ್ಸ್‌ನಲ್ಲಿ ಫ್ಲ್ಯಾಶ್‌ಲೈಟ್ ಹಾಕಿ ನೋಡಿ.
* ಫೋನ್ ಕಾಲ್ ಮಾಡಿ: ಕಾಲ್ ಮಾಡಿ ರೂಮ್‌ನಲ್ಲಿ ಮೂವ್ ಮಾಡಿ. ಕ್ರ್ಯಾಕ್ಲಿಂಗ್, ಬಝಿಂಗ್, ಸ್ಟಾಟಿಕ್ ನಾಯ್ಸ್ ಇದ್ರೆ ಕ್ಯಾಮೆರಾ ಇರಬಹುದು.
* ಹೋಟೆಲ್ ವೈ-ಫೈ ಸ್ಕ್ಯಾನ್ ಮಾಡಿ: ಫಿಂಗ್, ನೆಟ್‌ವರ್ಕ್ ಸ್ಕ್ಯಾನರ್ ಆಪ್ ಬಳಸಿ ವೈ-ಫೈ ಸ್ಕ್ಯಾನ್ ಮಾಡಿ.
* ಫಿಂಗರ್‌ನೈಲ್ ಟೆಸ್ಟ್ ಮಾಡಿ: ಮಿರರ್‌ನಲ್ಲಿ ಫಿಂಗರ್‌ನೈಲ್ ಟೆಸ್ಟ್ ಮಾಡಿ. ಗ್ಯಾಪ್ ಇಲ್ಲದಿದ್ರೆ ಟೂ-ವೇ ಮಿರರ್ ಇರಬಹುದು.