SBI ಪ್ಲಾಟಿನಮ್ ಜುಬಿಲಿ ಆಶಾ ಸ್ಕಾಲರ್ಶಿಪ್ 2025:
ಭಾರತದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದರ ಫೌಂಡೇಷನ್ ಮೂಲಕ ನೀಡಲಾಗುತ್ತಿರುವ SBI Platinum Jubilee Asha Scholarship 2025 ಗೆ ಅರ್ಜಿ ಕರೆಯಲಾಗಿದ್ದು,
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಎದುರಿಸಬಾರದು ಎನ್ನುವ ಉದ್ದೇಶದಿಂದ ಈ ಸ್ಕಾಲರ್ಶಿಪ್ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಈ ವಿದ್ಯಾರ್ಥಿವೇತನವನ್ನು ವಿವಿಧ ಹಂತದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದಾಗಿದೆ :
- ಪ್ರೌಢಶಾಲಾ ವಿದ್ಯಾರ್ಥಿಗಳು (9ರಿಂದ 12ನೇ ತರಗತಿ)
- ಪದವಿ ವಿದ್ಯಾರ್ಥಿಗಳು (Degree)
- ಸ್ನಾತ್ತಕೋತ್ತರ ವಿದ್ಯಾರ್ಥಿಗಳು (Post Graduation)
- ಮೆಡಿಕಲ್ ವಿದ್ಯಾರ್ಥಿಗಳು
- IIT ವಿದ್ಯಾರ್ಥಿಗಳು
- IIM ವಿಧ್ಯಾರ್ಥಿಗಳು
- ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು
ಸ್ಕಾಲರ್ಶಿಪ್ ಮೊತ್ತ ಎಷ್ಟು?
ಈ ವಿದ್ಯಾರ್ಥಿವೇತನದ ಮೊತ್ತ ಆಯಾ ವಿದ್ಯಾರ್ಥಿಯ ಕೋರ್ಸ್ ಹಾಗೂ ಅವಧಿಯ ಮೇಲೆ ಬದಲಾಗುತ್ತದೆ, ಸಾಮಾನ್ಯವಾಗಿ ₹15,000 ದಿಂದ ಪ್ರಾರಂಭವಾಗಿ ಗರಿಷ್ಠ ₹20 ಲಕ್ಷದ ವರೆಗೆ ವಿದ್ಯಾರ್ಥಿವೇತನ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಇರುವ ನಿಯಮಗಳು
- ಭಾರತೀಯ ನಾಗರೀಕರಾಗಿರಬೇಕು
- ಕನಿಷ್ಟ 9 ತರಗತಿ ಓದುತ್ತಿರಬೇಕು
- ಹಿಂದಿನ ವರ್ಷದ ಕೋರ್ಸ್ ನಲ್ಲಿ ಕನಿಷ್ಠ 75% ಅಂಕ ಪಡೆದಿರಬೇಕು
- ಕುಟುಂಬದ ಗರಿಷ್ಠ ವಾರ್ಷಿಕ ಆದಾಯ 3 ಲಕ್ಷ ಶಾಲಾ ವರ್ಗದವರಿಗೆ, ಉಳಿದವರಿಗೆ 6 ಲಕ್ಷ ಮೀರಿರಬಾರದು
- SC/ST ವಿಧ್ಯಾರ್ಥಿಗಳಿಗೆ 10% ಅಂಕಗಳ ಸಡಿಲಿಕೆ ಇರುತ್ತದೆ
ಬೇಕಾಗುವ ದಾಖಲೆಗಳು
- ಹಿಂದಿನ ವರ್ಷದ ಅಂಕಪಟ್ಟಿ
- ಪ್ರಸ್ತುತ ಓಡುತ್ತಿರುವ ಶಾಲಾ ದೃಡೀಕರಣ (Admission proof)
- ಆಧಾರ್ ಕಾರ್ಡ್
- ಬ್ಯಾಂಕ್ ವಿವರ
- ಕುಟುಂಬದ ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ಜಾತಿ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಮೇಲಿನ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ CSC, ಗ್ರಾಮ ಒನ್ ಮುಂತಾದ ಸೇವಾ ಕೇಂದ್ರದಲ್ಲಿ ಸಲ್ಲಿಸಬಹುದಾಗಿದೆ.
ಅಥವಾ SBI ನ ಅಧಿಕೃತ ವೆಬ್ಸೈಟ್ SBI Asha Scholarship ಗೆ ಭೇಟಿ ನೀಡಿ,
ಇಲ್ಲಿ ಸ್ಕಾಲರ್ಶಿಪ್ ನ ಸಂಪೂರ್ಣ ವಿವರ ಸಿಗಲಿದ್ದು, ನಂತರ APPLY NOW ಆಯ್ಕೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ದಿನಾಂಕ
ಈ ಸ್ಕಾಲರ್ಶಿಪ್ ಗೆ ಸೆಪ್ಟೆಂಬರ್ 19 ರಿಂದ ಅರ್ಜಿ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 15 ನವೆಂಬರ್, 2025 ಕೊನೆಯ ದಿನಾಂಕವಾಗಿದ್ದು, ನೀವು ಸ್ಕಾಲರ್ಶಿಪ್ ಪಡೆಯಲು ಅರ್ಹರಾಗಿದ್ದಲ್ಲಿ ತಕ್ಷಣ ಅರ್ಜಿ ಸಲ್ಲಿಸಿ.