ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಫ್ಲ್ಯಾಟ್ ಮೇಳದ ಮಾದರಿಯಲ್ಲೇ ಇದೇ ಮೊದಲ ಬಾರಿಗೆ ಕ್ರಯಪತ್ರ ನೋಂದಣಿ ಮೇಳವನ್ನೂ ಆಯೋಜಿಸಲಿದೆ.
ಪ್ರಾಧಿಕಾರವು ಅ.3 ರಿಂದ 16ರವರೆಗೆ ಬಿಡಿಎ ಕೇಂದ್ರ ಕಚೇರಿಯಲ್ಲಿ ”ಸೇಲ್ ಡೀಡ್ ಮೇಳ’ ವನ್ನು ಆಯೋಜಿಸುತ್ತಿದೆ. ಈ ಮೂಲಕ ಫ್ಲ್ಯಾಟ್ಗಳನ್ನು ಹಂಚುವ ಜತೆಗೆ ಸೇಲ್ ಡೀಡ್ ಕೂಡ ಮಾಡಿಕೊಡಲಾಗುತ್ತಿದೆ.
ಫ್ಲ್ಯಾಟ್, ವಿಲ್ಲಾ ಖರೀದಿಸಿದವರು, ಉಳಿದ ಹಣ ಪಾವತಿಸದ, ಅಗತ್ಯ ದಾಖಲೆಗಳನ್ನು ಸಲ್ಲಿಸದ ಖರೀದಿದಾರರು ಸೆಪ್ಟೆಂಬರ್ 30ರೊಳಗೆ ಪೂರ್ಣ ಹಣ ಪಾವತಿಸಿ ದಾಖಲೆ ಸಲ್ಲಿಸಿದರೆ ಅಕ್ಟೋಬರ್ ನಲ್ಲಿ ಸೇಲ್ ಡೀಡ್ ನೊಂದಣಿ ಕ್ರಯಪತ್ರ ಮಾಡಿಕೊಡಲಾಗುವುದು.
ಮೇಳದಲ್ಲಿ ಸಬ್ ರಿಜಿಸ್ಟ್ರಾರ್ ಜೊತೆಗೆ ಬಿಡಿಎ ಅಧಿಕಾರಿಗಳು ಹಾಜರಿರಲಿದ್ದು, ದಾಖಲೆಗಳಿಗೆ ಸಂಬಂಧಿಸಿದ ಗೊಂದಲವನ್ನು ಸ್ಥಳದಲ್ಲೇ ಪರಿಹರಿಸಿ ಕ್ರಯಪತ್ರ ನೋಂದಣಿ ಮಾಡಿಕೊಡಲಾಗುವುದು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ವಯಂ ಪ್ರಮಾಣ ಪತ್ರ, ಬ್ಯಾಂಕ್ ಎನ್ಒಸಿ, ದೃಢೀಕೃತ ಪ್ರತಿ, ಅಗತ್ಯವಿದ್ದಲ್ಲಿ ಫಾರಂ 16 ಬಿ ಮತ್ತು 26 ಕ್ಯೂಬಿ, ಪಾಸ್ ಪೋರ್ಟ್ ಅಳತೆಯ ಮೂರು ಭಾವಚಿತ್ರ ದಾಖಲೆಗಳು ಕಡ್ಡಾಯವಾಗಿದೆ.