ಭಾರತೀಯರಿಗೆ ಪ್ರಾಥಮಿಕ ಗುರುತಿನ ದಾಖಲೆಯೆಂದರೆ ಅದು ಆಧಾರ್ ಕಾರ್ಡ್ ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ಸೌಲಭ್ಯಗಳು ಮತ್ತು ಟೆಲಿಕಾಂ ಸಂಪರ್ಕಗಳಿಗಾಗಿ 12-ಅಂಕಿಯ ವಿಶಿಷ್ಟ ಐಡಿ ಮುಖ್ಯವಾಗಿದೆ. ಈ ಕಾರ್ಡ್ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ
ಆದರೆ ಇತ್ತೀಚೆಗೆ ಆಧಾರ್ ಕಾರ್ಡ್ ನ್ನು ಕದ್ದು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಿಮ್ಮ ಆಧಾರ್ ದುರ್ಬಳಕೆಯಾಗುತ್ತಿದೆಯೇ ಎಂಬುದನ್ನು ನೀವು ಹೇಗೆ ಪರಿಶೀಲಿಸಬಹುದು? ಈ ಹಿಂದೆ ನಿಮ್ಮ ಆಧಾರ್ ಸಂಖ್ಯೆಯನ್ನು ಎಲ್ಲಿ ಬಳಸಲಾಗಿದೆ ಎಂಬುದನ್ನು ನೀವು ಪರಿಶೀಲಿಸಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI- Unique Identification Authority of India) ಬಳಕೆದಾರರಿಗೆ ತಮ್ಮ ಆಧಾರ್ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ.
ನಿಮ್ಮ ಆಧಾರ್ ಸಂಖ್ಯೆಯ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಹೀಗೆ ಮಾಡಿ. myAadhaar ಪೋರ್ಟಲ್‌ಗೆ ತೆರಳಿ. ನಿಮ್ಮ ಆಧಾರ್ ನಂಬರ್, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು OTP ಯೊಂದಿಗೆ ಲಾಗಿನ್ ಮಾಡಿ, ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ನಿಮ್ಮ ಖಾತೆಯನ್ನು ಪ್ರವೇಶಿಸಲು ಅದನ್ನು ಎಂಟರ್ ಮಾಡಿ.
ದೃಢೀಕರಣ ಇತಿಹಾಸ (Authentication history) ಆಯ್ಕೆಮಾಡಿ ಮತ್ತು ನೀವು ಪರಿಶೀಲಿಸಲು ಬಯಸುವ ಅವಧಿಗೆ ದಿನಾಂಕ ಶ್ರೇಣಿಯನ್ನು ಆಯ್ಕೆ ಮಾಡಿ.
ಲಾಗ್ ಅನ್ನು ಪರಿಶೀಲಿಸಿ ಮತ್ತು ಯಾವುದೇ ಪರಿಚಯವಿಲ್ಲದ ಅಥವಾ ಅನುಮಾನಾಸ್ಪದ ವಹಿವಾಟುಗಳನ್ನು ನೋಡಿ. ನಿಮಗೆ ಅನಧಿಕೃತ ಚಟುವಟಿಕೆ ಬಗ್ಗೆ ಕಂಡುಬಂದರೆ, ತಕ್ಷಣವೇ ಅದನ್ನು UIDAI ಗೆ ವರದಿ ಮಾಡಿರಿ.