ಚಿತ್ರದುರ್ಗ : ಚಿತ್ರದುರ್ಗ ನಗರದ ಕೆಳಕೋಟೆ ಬನಶಂಕರಿ ಲೇ ಔಟ್‍ನಲ್ಲಿರುವ ರುಡ್‍ಸೆಟ್ ಸಂಸ್ಥೆ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಅಕ್ಟೋಬರ್ 6 ರಿಂದ ನವೆಂಬರ್ 12 ವರೆಗೆ 38 ದಿನಗಳ ಕಂಪ್ಯೂಟರ್ ಅಕೌಂಟಿಂಗ್ ಆಧಾರಿತ ಟ್ಯಾಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
19 ರಿಂದ 45 ವರ್ಷದ ಒಳಗಿನ ಕನ್ನಡ ಒದಲು ಬರುವ ಕಂಪ್ಯೂಟರ್ ಪ್ರಾಥಮಿಕ ಜ್ಞಾನ ಹೊಂದಿರುವ ಆಸಕ್ತರು ಆಧಾರ್, ರೇಷನ್, ಬ್ಯಾಂಕ್ ಪಾಸ್‍ಬುಕ್ ಪ್ರತಿಗಳು ಮೊಬೈಲ್ ನಂಬರ್ ನೊಂದಿಗೆ ಅ.6 ರಂದು ನೇರವಾಗಿ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 8618282445, 9481778047, 9019299901 ಹಾಗೂ 8660627785ಗೆ ಕರೆ ಮಾಡಬಹುದು.