ಸುಬ್ರಹ್ಮಣ್ಯ ಸ್ವಾಮಿಯ ವೀರಗಾಥೆ! ದುಷ್ಟ ತಾರಕಾಸುರನನ್ನು ವೀರ ಶೂರ ಕಾರ್ತಿಕೇಯನು ಸಂಹರಿಸಿದ ಕಥೆ!

WhatsApp
Telegram
Facebook
Twitter
LinkedIn

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ994570188

ವಜ್ರಾಂಗ ಹಾಗೂ ವರಾಂಗಿ ಇವರ ಮಗನೇ ತಾರಕಾಸುರ. ಇವನು ಹುಟ್ಟುವಾಗಲೇ ಕೆಲವು ಅಪಶಕುನಗಳುಂಟಾಗಿ ಇವನು ಲೋಕಕಂಟಕನಾಗುತ್ತಾನೆ ಎಂದು ತಿಳಿದವರು ಹೇಳಿದ್ದರು. ಶೂರಪದ್ಮ ನೆಂಬುವನು ಕೂಡಾ ಇವನ ಹಾಗೆ ಲೋಕಕಂಟಕನಾಗಿದ್ದ.

ಇವರಿಬ್ಬರೂ ಬೆಳೆದು ದೊಡ್ಡವರಾದರು. ತಾರಕಾಸುರ ಶೋಣಿತಪುರದಲ್ಲಿ ಹಾಗೂ ಶೂರಪದ್ಮ ವೀರ ಮಹೇಂದ್ರ ಎಂಬಲ್ಲಿ ರಾಜರಾದರು.

ತಾರಕಾಸುರ ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಿ, ತನಗೆ ಸಾವು ಬರುವುದಾದರೆ ಶಿವನ ಮಗನಿಂದ ಅದೂ  ಏಳು ದಿನದ ಮಗುವಾಗಿದ್ದಾಗ ಎಂದು ಬ್ರಹ್ಮನಿಂದ ವರವನ್ನು ಪಡೆದ. ಬ್ರಹ್ಮ ತಥಾಸ್ತು ಎಂದ.

ಶಿವನಿಗೆ ಮದುವೆಯಲ್ಲಿ? ಇನ್ನು ಅವನಿಗೆ  ಮಗನೆಲ್ಲಿ ಹುಟ್ಟಿಯಾನು? ತನಗೆ ಸಾವಿಲ್ಲ, ಎಂಬ ಗರ್ವದಿಂದ ತಾರಕಾಸುರ ಮೂರು ಲೋಕಗಳನ್ನು ಗೆದ್ದು, ಸ್ವರ್ಗ ಮರ್ತ್ಯ, ಪಾತಾಳಗಳನ್ನೂ ತನ್ನ ಅಧೀನ ಮಾಡಿಕೊಂಡ. ಸ್ವರ್ಗದಲ್ಲಿ ದೈತ್ಯರನ್ನು ಇರಿಸಿ, ದೇವತೆಗಳಿಗೆ ಕಾಟ ಕೊಡುತ್ತಿದ್ದ. ದೈತ್ಯರ ಕಾಟವನ್ನು ತಾಳಲಾರದೆ ದೇವತೆಗಳು ಬ್ರಹ್ಮನಲ್ಲಿ ಮೊರೆ ಇಟ್ಟರು. ತನ್ನವರದಂತೆ ಶಿವನಿಗೆ ಮಗ ಹುಟ್ಟುವವರೆಗೂ ತಾರಕನಿಗೆ ಮರಣವಿಲ್ಲವೆಂದು ತಿಳಿದು ಬ್ರಹ್ಮ, ತಾರಕಾಸುರನ ಬಳಿಗೆ ಬಂದ.

ತಾರಕಾ, ನೀನು ಬಲಶಾಲಿ ಏನೋ ನಿಜ, ನಿನ್ನಿಂದಾಗಿ ದೇವತೆಗಳು ದೇವಲೋಕದಲ್ಲಿ ಇರುವುದು ಬಹಳ ಕಷ್ಟವಾಗುತ್ತಿದೆ, ಅವರ ಪಾಡಿಗೆ ಅವರು ದೇವಲೋಕದಲ್ಲಿ ಬದುಕಲು ಬಿಟ್ಟುಬಿಡು, ಎಂದು ಕೇಳಿಕೊಂಡ ಬ್ರಹ್ಮ.

ಆಗಲಿ ಎಂದು ತಾರಕಾಸುರ ದೇವಲೋಕವನ್ನು ದೇವತೆಗಳಿಗೆ ಬಿಟ್ಟುಕೊಟ್ಟ.

ಆದರೆ ಅವನ ದುಷ್ಟತನವೇನೂ  ಕಡಿಮೆಯಾಗಲಿಲ್ಲ. ದೇವತೆಗಳಿಗೆ ಅವನು ಯಾವಾಗಲೂ  ಹಿಂಸೆ ಕೊಡುತ್ತಲೇ ಇದ್ದ. ದಿನ ಬೆಳಗಾದರೆ ಅವರಿಗೆ ಒಂದಲ್ಲಾ ಒಂದು ತೊಂದರೆ ಇವನಿಂದ ಆಗುತ್ತಲೇ  ಇತ್ತು.

ಆಗ ಬ್ರಹ್ಮನೇ ದೇವತೆಗಳಿಗೆ ಒಂದು ಉಪಾಯ ಸೂಚಿಸಿದ. ಹೇಗಾದರೂ ಮಾಡಿ ತಪೋನಿರತನಾದ ಶಿವ, ಪಾರ್ವತಿಯನ್ನು ನೋಡುವಂತೆ ಮಾಡಿ ಎಂದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ದಕ್ಷ ಪ್ರಜಾಪತಿಯ ಯಾಗದಲ್ಲಿ ಯಜ್ಞ ಕುಂಡಕ್ಕೆ ಹಾರಿ, ದಾಕ್ಷಾಯಿಣಿ ಪ್ರಾಣ ಕಳೆದುಕೊಂಡ ನಂತರ , ಶಿವ ತನ್ನ ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲಿ ತಪೋನಿರತನಾಗಿಬಿಟ್ಟ. ದಾಕ್ಷಾಯಿಣಿ ಮುಂದಿನ ಜನ್ಮದಲ್ಲಿ ಪರ್ವತರಾಜ ಹಿಮವಂತನ ಮಗಳು,ಪಾರ್ವತಿಯಾಗಿ ಜನಿಸಿ, ಶಿವನನ್ನು ಒಲಿಸಲೆಂದು ತಪೋನಿರತಳಾಗಿ ಕುಳಿತಿದ್ದಳು.

ದೇವತೆಗಳು ಶಿವನ ತಪೋಭಂಗಮಾಡಲು ಮನ್ಮಥನನ್ನು ಶಿವನಲ್ಲಿಗೆ ಕಳುಹಿಸಿದರು. ಮನ್ಮಥ ತನ್ನ ಪುಷ್ಪ ಬಾಣಗಳನ್ನು ಶಿವನಿಗೆ ಬಿಟ್ಟು, ಅವನ ತಪೋಭಂಗ ಮಾಡಿದ. ಕೆರಳಿದ ಶಿವ, ರೌದ್ರ ರೂಪ ತಾಳಿ, ತನ್ನ ಮೂರನೇಯ ಕಣ್ಣನ್ನು ತೆರೆದು ಮನ್ಮಥನನ್ನು ಭಸ್ಮಮಾಡಿದ. ಆಗ  ಶಿವನ ತಪಸ್ಸು ಭಂಗವಾಯಿತು.

ಪಾರ್ವತಿ ತಪಸ್ಸಿಗೆ ಕುಳಿತಿರುವುದು, ಋಷಿ ಮುನಿಗಳಿಂದ ಶಿವನಿಗೆ ತಿಳಿಯಿತು.ಆತ, ವಟು ವೇಷ ಧರಿಸಿ ಪಾರ್ವತಿಯ ಬಳಿಗೆ ಬಂದು, ಬೇಕೆಂದೇ ಶಿವನನ್ನು ಕುರಿತು ಹೀಯಾಳಿಸಿ ಮಾತನಾಡಿದ.

ಪಾರ್ವತಿ ಇವನ ಮಾತಿನಿಂದ ಕೋಪಗೊಂಡು, ಶಿವನನ್ನು ನೀಚ, ಮದಾಂಧ, ಎಂದು ಹಂಗಿಸಿ ಮಾತನಾಡಲು ನಿನಗೆಷ್ಟು  ಧ್ಯೆರ್ಯ, ಎಂದು ವಟುವನ್ನು ಗದರಿಸಿದಳು.

ಆಗ ವಟು ವೇಶದಲ್ಲಿದ್ದ  ಶಿವ, ನಗುತ್ತಾ ,ಪಾರ್ವತಿ ,ನೀನು ವ್ಯರ್ಥವಾಗಿ, ತಪಸ್ಸು ಮಾಡಿ ನಿನ್ನ ಆರೋಗ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿರುವೆ. ಆ  ಶಿವನನ್ನು ಏನೆಂದು ನೀನು ಬಯಸುವೆ? ಅವನೋ ಸ್ಮಶಾನದಲ್ಲಿರುವವನು, ಅವನ ಆಭರಣ ಹಾವು, ಆಯುಧವೋ ತ್ರಿಶೂಲ, ನೀನು ನೋಡಿದರೆ, ರಾಜಕುಮಾರಿ, ಸುಕೋಮಲೆ, ಸರ್ವಾಲಂಕಾರ ಭೂಷಿತೆ. ಇನ್ನು ಅವನ ವಾಹನ ,ಎತ್ತು, ಅವನು ಬೇಡುವುದು ಭಿಕ್ಷೆ, ಮೈಗೆಲ್ಲಾ ಯಾವಾಗಲೂ ಬೂದಿ ಬಳಿದುಕೊಂಡಿರುತ್ತಾನೆ. ನಿನ್ನಂತಹ ಸುಂದರಿ, ಹೋಗಿ, ಹೋಗಿ, ಆ ಕುರೂಪಿ ಶಿವನನ್ನು ವರಿಸಲು ಬಯಸುವುದೇ? ಎಂದು ಹೇಳಿದ.

ಶಿವನಿಂದನೆ  ತಾಳಲಾರದೆ ಪಾರ್ವತಿ, ಅ ಜಾಗ ಬಿಟ್ಟು ಬೇರೆಡೆಗೆ, ಹೊರಟು ನಿಂತಳು. ಆಗ ವಟು ವೇಷದಲ್ಲಿದ್ದ ಶಿವ,ತನ್ನ ನಿಜ ಸ್ವರೂಪ ತಾಳಿ, ಪಾರ್ವತಿಯನ್ನು ಮೆಚ್ಚಿಕೊಂಡು ಮದುವೆಗೆ ಒಪ್ಪಿದ. ಹೀಗೆ ದೇವತೆಗಳ ಉಪಾಯವೂ ಫಲಿಸಿತು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ಶಿವ ಪಾರ್ವತಿಯರ ಕಲ್ಯಾಣ ಋಷಿಮುನಿಗಳ ಸಮ್ಮುಖದಲ್ಲಿ, ವಿಜೃಂಭಣೆಯಿಂದ ನೆರವೇರಿತು. ಹಿಮವಂತನಿಗೆ ಇದು ಹೆಮ್ಮೆಯ ಸಂಗತಿಯಾಯಿತು. ಪಾರ್ವತಿ ಶಿವನನ್ನು ಮದುವೆಯಾಗಿ ಲೋಕಮಾತೆಯಾದಳು.

ಸ್ವಲ್ಪ ಕಾಲದಲ್ಲಿ ಪಾರ್ವತಿಯು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಟಿಯಂದು ಗಂಡು ಮಗುವಿಗೆ ಜನ್ಮ ನೀಡಿದಳು. ಮಗು ಸೂರ್ಯ ಚಂದ್ರರ ಕಾಂತಿಯನ್ನು ಹೊತ್ತು ತೇಜಸ್ವಿಯಾಗಿತ್ತು. ಅವನು ಶಿವನ ಮಗನಲ್ಲವೇ? ಹುಟ್ಟುವಾಗಲೇ ಶಕ್ತ್ಯಾಯುಧ , ಶೂಲ, ಮಹಾಸ್ತ್ರ ದಿವ್ಯಾಸ್ತ್ರಗಳನ್ನು ಧರಿಸಿದ್ದ. ಕೃತ್ತಿಕೆಯರು ಬಂದು ಮಗುವನ್ನು ಮುದ್ದಿಸಿ ಹಾಲೆರೆದರು.

ಅವನು ಶಿವನ ಮಗ ಕಾರ್ತಿಕೇಯನಾದ. ಅವನ ಶರೀರ ಗಟ್ಟಿಮುಟ್ಟಾಗಿತ್ತು. ಕೆಲವೇ ದಿನಗಳಲ್ಲಿ ಮುಖದಲ್ಲಿ ಕಾಂತಿ ಚಿಮ್ಮಿ, ಬುದ್ಧಿ ವಿಕಾಸವಾಗಿತ್ತು. ಶಿವನು ಕುಮಾರನನ್ನು ದೇವತೆಗಳ ಸೈನ್ಯಕ್ಕೆ ಸೇನಾಪತಿಯನ್ನಾಗಿ ನೇಮಿಸಿದ.

ತಾರಕಾಸುರನ ವಧೆಗೆ ಕಾರ್ತಿಕೇಯನನ್ನು ದೇವತೆಗಳ ಸೈನ್ಯದೊಂದಿಗೆ ಕಳುಹಿಸಿಕೊಡಲಾಯಿತು. ರಣವಾದ್ಯಗಳು ಮೊಳಗಿದವು. ಯುದ್ಧಕ್ಕೆ ಸಿದ್ದನಾಗಲು ತಾರಕಾಸುರನಿಗೆ ಹೇಳಿ ಕಳುಹಿಸಿದರು.

ತಾರಕಾಸುರ ತನ್ನ ಅರಮನೆಯ ಉಪ್ಪರಿಗೆಯ ಮೇಲಿನಿಂದ ಕಾರ್ತಿಕೇಯನ ಸೈನ್ಯವನ್ನು ನೋಡಿ ದಿಗ್ಭ್ರಮೆಗೊಂಡ. ಇವನೇ ಶಿವನ ಮಗನೆಂದು ಅವನಿಗೆ ಸ್ಪಷ್ಟವಾಯಿತು. ಹುಟ್ಟಿದ ಕೆಲವೇ ದಿನಗಳಲ್ಲಿ ಶಿವಕುಮಾರ ವೀರನೂ ಶೂರನೂ ಬುದ್ದಿವಂತನೂ ಆಗಿ ಬಂದಿದ್ದ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

ತಾರಕನ ಸೈನ್ಯಕ್ಕೂ , ಕಾರ್ತಿಕೇಯನ ಸೈನ್ಯಕ್ಕೂ, ಯುದ್ಧ ನಡೆಯಿತು. ಯುದ್ಧದಲ್ಲಿ ಇಂದ್ರನೂ ಭಾಗವಹಿಸಿದ್ದ, ಆದರೆ ತಾರಕಾಸುರ ಇಂದ್ರನನ್ನು ಸೋಲಿಸಿಬಿಟ್ಟ. ತಾರಕಾಸುರನ ಶಕ್ತ್ಯಾಯುಧದಿಂದ ಮಹಾವಿಷ್ಣು ಕೂಡಾ ತತ್ತರಿಸಿದ. ಬ್ರಹ್ಮನ ವರದಂತೆ ಕಾರ್ತಿಕೇಯನೇ ತಾರಕನನ್ನು ಕೊಲ್ಲಬೇಕೆಂದಿತ್ತು. ಆದರೂ ,ಏಳು ದಿನದ ಈ ಶಿಶು  ತನ್ನನ್ನೇನು ಮಾಡಬಲ್ಲದು, ಎಂದುಕೊಂಡಿದ್ದ ಅವನು.

ಇಷ್ಟು ದೊಡ್ಡ ಸೈನ್ಯದ ಎದುರು ಈ ಪುಟ್ಟ ಮಗುವನ್ನು ಬಿಟ್ಟಿದ್ದೀರಲ್ಲಾ! ಎಂದು ತಾರಕಾಸುರ ದೇವತೆಗಳನ್ನು ಅಣಕಿಸಿದ. ಇದು ನನ್ನನ್ನು ಕೊಲ್ಲಬಲ್ಲದೇ, ಇದನ್ನು ಈಗಲೇ ಹೊಸಕಿ ಹಾಕುವೆ ಎಂದ.

ಕಾರ್ತಿಕೇಯ ಬಾಲ ಸೂರ್ಯನಂತೆ ಪ್ರಕಾಶಿಸುತ್ತಿದ್ದ. ಅವನನ್ನು ನೋಡಿ ತಾರಕಾಸುರ, ನೀನಿನ್ನು ಪುಟ್ಟ ಮಗು, ಏನೂ ಅರಿಯದವ, ಯುದ್ಧವೆಂದರೆ ಆಟವಲ್ಲ, ಹೋಗು  ಯುದ್ದಕ್ಕೆ ನಿನ್ನ ಅಪ್ಪನನ್ನು ಬರ ಹೇಳು ಎಂದು ಹೇಳಿದ.

‌ ಕಾರ್ತಿಕೇಯನೇನು ಸಾಮಾನ್ಯನೇ, ಅವನು ಷಣ್ಮುಖ, ಶಿವಪುತ್ರ, ತಾರಕಾಸುರನನ್ನುನೋಡಿ ಹೇಳಿದ, ಯುದ್ಧ ಮಾಡುವುದನ್ನು ಬಿಟ್ಟು, ಬರೀ ತಲೆ ಹರಟೆ ಮಾತನಾಡುತ್ತಾ ಇರುವೆಯಲ್ಲಾ, ಇದೊ, ತೆಗೆದುಕೋ, ಎಂದು ತನ್ನ ತಂದೆ ತಾಯಿಗಳನ್ನು ನೆನೆದು, ಅವರಿಗೊಂದಿಸಿ, ಶಕ್ತ್ಯಾಯುಧವನ್ನು ಅವನೆಡೆಗೆ ಬೀಸಿದ. ಅದು ತಾರಕಾಸುರನ ಎದೆಗೆ ಬಲವಾಗಿ ತಿವಿಯಿತು. ತಾರಕಾಸುರ ದೊಡ್ಡ ಮರವೊಂದು ಉರುಳಿ ಬಿದ್ದಂತೆ, ಭೂಮಿಗೆ ಉರುಳಿ  ಸತ್ತುಬಿದ್ದ.

ದೇವತೆಗಳು ಜಯ ಘೋಷ ಮಾಡಿದರು. ಹೂವಿನ ಮಳೆ ಸುರಿಸಿದರು. ದೇವತಾ ಸ್ತ್ರೀಯರು ಕಾರ್ತಿಕೇಯನಿಗೆ ಆರತಿ ಬೆಳಗಿದರು.

ಮುಂದೆ ಕಾರ್ತಿಕೇಯ , ತಾರಕಾಸುರನ ಹಾಗೆ ಬಲಾಢ್ಯನಾಗಿದ್ದ, ಶೂರ ಪದ್ಮನನ್ನು ಕೂಡಾ ಸಂಹರಿಸಿದ. ಶೂರಪದ್ಮನ ಸೆರೆಯಲಿದ್ದ ಅನೇಕ ದೇವತೆಗಳನ್ನು ಬಿಡಿಸಿದ.  ಅಸಮಾನ್ಯ, ಶೂರ ,ವೀರ,ದೇವ ಸೇನಾಧಿಪತಿ, ಶಿವನ ಕುಮಾರ ಷಣ್ಮುಖನನ್ನು ಮೂರು ಲೋಕಗಳೂ ಮೆಚ್ಚಿ ಕೊಂಡಾಡಿದವು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ

ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ

9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon