ಕೊಚ್ಚಿ: ಅಣಬೆ ಹಾಗೂ ಮ್ಯಾಜಿಕ್ ಮಶ್ರೂಮ್ ಕೇವಲ ಶಿಲೀಂಧ್ರವೇ ಹೊರತು, ಅವುಗಳನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕದ್ರವ್ಯ ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಆರೋಪಿಯೊಬ್ಬರಿಗೆ ಜಾಮೀನು ನೀಡಿದೆ. ಆರೋಪಿ ರಾಹುಲ್ ರೈ ಎಂಬವರನ್ನು ಕಳೆದ ವರ್ಷದ ಅ.4ರಂದು ಮಾನಂತವಾಡಿ ಅಬಕಾರಿ ಅಧಿಕಾರಿಗಳು ಬಂಧಿಸಿದ್ದರು. ಆತನಿಂದ 6.59ಗ್ರಾಂ ಚರಸ್, 13.2 ಗ್ರಾಂ ಗಾಂಜಾ, ಮ್ಯಾಜಿಕ್ ಮಶ್ರೂಮ್ ಇರುವ 226 ಗ್ರಾಂ ಸೈಲೋಸಿಬಿನ್(ಭ್ರಾಮಕ ಸಂಯುಕ್ತ), ಕ್ಯಾಪ್ಸೂéಲ್‌ಗಳನ್ನು ಒಳಗೊಂಡ 50ಗ್ರಾಂ ಸೈಲೋಸಿಬಿನ್ ವಶಪಡಿಸಿಕೊಳ್ಳಲಾಗಿತ್ತು. “ಆರೋಪಿ ಬಳಿ ಇದ್ದ ಮಾದಕ ದ್ರವ್ಯ ಸಣ್ಣ ಪ್ರಮಾಣದ್ದು. ಅಣಬೆಗಳನ್ನು ಮಾದಕ ದ್ರವ್ಯ ಎಂದು ಪರಿಗಣಿಸಲಾಗದೆಂದು ಕೋರ್ಟ್ ಹೇಳಿದೆ