ಚಿತ್ರದುರ್ಗ : ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದವತಿಯಿಂದ ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಮಹೋತ್ಸವದ ಮೇಲೆ ರಾಜ್ಯ ಸರ್ಕಾರ ಹಾಗು ಜಿಲ್ಲಾಡಳಿತ ವಿನಾಕಾರಣ ತೊಂದರೆಯನ್ನು ನಿಡುತ್ತಿದೆ, ಇದನ್ನು ಖಂಡಿಸಿ ಸೆ. 10 ರಂದು ಚಿತ್ರದುರ್ಗ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗ ದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಯೋಜಕರಾದ ಪ್ರಭಂಜನ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಹಿಂದೂ ಮಹಾ ಗಣಪತಿಯ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 18 ವರ್ಷಗಳಿಂದ ಚಿತ್ರದುರ್ಗ ನಗರದ ಹಿಂದೂ ಮಹಾ ಗಣಪತಿಯನ್ನು ಯಾವುದೇ ವಿಘ್ನ ಇಲ್ಲದೆ ನಡೆಸಿಕೊಂಡು ಬರಲಾಗುತ್ತಿದೆ, ಇದರಲ್ಲಿ ಲಕ್ಷಾಂತರ ಭಕ್ತಾಧಿಗಳು ಸೇರಿದರೂ ಸಹಾ ಯಾವುದೇ ಒಂದು ಸಣ್ಣ ಗಲಾಟೆಯೂ ಸಹಾ ನಡೆಯದೆ ಸುಲಲಿತವಾಗಿ ಶೋಭಾಯಾತ್ರೆ ನಡೆಯುತ್ತಿದೆ. ಇದರಲ್ಲಿ ಎಲ್ಲರ ಸಹಕಾರ ಸಹಾಯ ಇದೆ, ಆದರೆ ಈ ಬಾರಿ ಮಾತ್ರ ಸರ್ಕಾರ ಹಾಗೂ ಜಿಲ್ಲಾಡಳಿತ ವಿನಾಕಾರಣ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ತೊಂದರೆಯನ್ನು ನೀಡುತ್ತಿದೆ ಎಂದು ಕಿಡಿ ಕಾರಿದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಗಳಿಂದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದವತಿಯಿಂದ ವಿಶೇಷ ಆಹ್ವಾನಿತರು ಆಗಮಿಸುತ್ತಾರೆ ಅವರಿಂದ ಉಪನ್ಯಾಸ, ಪೂಜಾ ಕಾರ್ಯಕ್ರಮ ನಡೆಯುತ್ತದೆ ಆದರೆ ಈ ಸಾಲಿನ ಮಹೋತ್ಸವದಲ್ಲಿ ಪ್ರಾಂತ ಸಹ ಕಾರ್ಯದರ್ಶಿಗಳಾದ ಶರಣ್ ಪಂಪ್ಸೆಲ್ ರವರು ಜಿಲ್ಲಾ ಪ್ರವೇಶಕ್ಕೆ ನಿರ್ಭಂಧವನ್ನು ಹೇರಲಾಗಿದೆ ಯಾವ ಕಾರಣಕ್ಕಾಗಿ ಈ ಪ್ರವೇಶವನ್ನು ತಡೆ ಹಿಡಿಯಲಾಗಿದೆ ಎಂದು ಇದುವರೆವಿಗೂ ನಮಗೆ ಗೊತ್ತಿಲ್ಲ ಆವರಿಂದ ಯಾವುದೇ ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ ಬರೀ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಾರೆ ಇದಕ್ಕೂ ಸಹಾ ಜಿಲ್ಲಾಡಳಿತ ನಿರ್ಭಂಧವನ್ನು ಹೇರಿರುವುದಿರುವುದು ಸರಿಯಾದ ಕ್ರಮವಲ್ಲ ಇದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಖಂಡಿಸುತ್ತದೆ ಎಂದರು.
ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯೂ ಸೆ. 13 ರ ಶನಿವಾರ ನಡೆಯಲಿದೆ, ಇದರಲ್ಲಿ ರಾಜ್ಯವಲ್ಲದೆ ನೆರೆ ರಾಜ್ಯದಿಂದಲೂ ಸಹಾ ಭಕ್ತಾಧಿಗಳು ಭಾಗವಹಿಸುತ್ತಾರೆ. ಎಲ್ಲರಿಗೂ ಸಹಾ ಧ್ವನಿ ಕೇಳಲಿ ಎಂಬ ದೃಷ್ಟಿಯಿಂದ ಹೆಚ್ಚುವರಿಯಾಗಿ ಧ್ವನಿ ಪೆಟ್ಟಿಗೆಯನ್ನು ಕೇಳಲಾಗುತ್ತಿದೆ ಆದರೆ ಇದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಸಮ್ಮತಿಯನ್ನು ನೀಡುತ್ತಿಲ್ಲ ಈ ಎರಡು ವಿಷಯಗಳ ವಿರುದ್ದವಾಗಿ ಸೆ. 10 ರ ಸಂಜೆ 4 ಗಂಟೆ ಯಿಂದ ಹಿಂದೂ ಮಹಾ ಗಣಪತಿ ಮಂಟಪದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಇದರಲ್ಲಿ ಸಮಸ್ತ ಹಿಂದು ಭಾಂಧವರು ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಹಿಂದೂ ಮಹಾ ಗಣಪತಿ 2025ರ ಸಮಿತಿಯ ಅಧ್ಯಕ್ಷರಾದ ಶರಣ ಕುಮಾರ್ ಮಾತನಾಡಿ ನಾವು ಸಹಾ ನಿನ್ನೆ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಬೇಟಿ ಮಾಡಿ ಶೋಭಾಯಾತ್ರೆಯಲ್ಲಿ ಹೆಚ್ಚುವರಿಯಾಗಿ ಧ್ವನಿ ವರ್ಧಕಗಳನ್ನು ಹಾಕಲು ಅನುಮತಿಯನ್ನು ನೀಡುವಂತೆ ಮನವಿ ಮಾಡಲಾಗಿದೆ ಇದಕ್ಕ ಸಕರಾತ್ಮಕವಾಗಿ ಸ್ಪಂಧಿಸಿದ ರಕ್ಷಣಾಧಿಕಾರಿಗಳಿ ಇದರ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತದ ಬಗ್ಗೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದರು. ಗೋಷ್ಟಿಯಲ್ಲಿ ಕೇಶವ್ ಭಾಗವಹಿಸಿದ್ದರು