ಚಿತ್ರದುರ್ಗ: ಹಿಂದೂ ಮಹಾಗಣಪತಿ ನಿನ್ನೆ ಪ್ರತಿಷ್ಠಾಪನೆಗೊಂಡಿದ್ದು. 18 ದಿನಗಳ ಕಾಲ ನಿರಂತರವಾಗಿ ಪೂಜೆ, ದೀಪಾರಾಧಾನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.. ಸಂಜೆ ಸಮಯದಲ್ಲಿ ಯುವ ಜನತೆಯಲ್ಲಿ ರಾಷ್ಟ್ರಭಕ್ತಿ ಮೂಡಿಸುವಂತಹ ಉಪನ್ಯಾಸಗಳು ನಡೆಯುತ್ತವೆ ಎಂದು 2025ರ ಹಿಂದು ಮಹಾ ಗಣಪತಿ ಸಮಿತಿಯ ಅಧ್ಯಕ್ಷರಾದ ಶರಣಕುಮಾರ್ ತಿಳಿಸಿದರು.
ಚಿತ್ರದುರ್ಗ ನಗರದ ಹಿಂದು ಮಹಾ ಗಣಪತಿ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಪೆಹಲ್ಗಾಂನಲ್ಲಿ ನಡೆದ ದಾಳಿಗೆ ಸಂಬಂಧಪಟ್ಟಂತೆ ನಮ್ಮ ಸೈನಿಕರು ಶತ್ರು ರಾಷ್ಟ್ರಕ್ಕೆ ನುಗ್ಗಿ ಶತ್ರುಗಳ ನಾಶ ಮಾಡಿದ ಹೋರಾಟಕ್ಕೆ ಆಪರೇಷನ್ ಸಿಂಧೂರ ಎಂದು ಹೆಸರನ್ನು ಇಡಲಾಗಿತ್ತು.. ಈ ಹಿನ್ನಲೆಯಲ್ಲಿ ಹಿಂದೂ ಮಹಾಗಣಪತಿಯ ಮಂಟಪಕ್ಕೆ ಈ ಹೆಸರನ್ನು ನೀಡಲಾಗಿದೆ.ಮಂಟಪವನ್ನು ಹೊಯ್ಸಳ ಹಾಗೂ ಜೈಪುರ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ದಿನಾಂಕ: 09.09.2025 ರಂದು ನಗರದ ನವದುರ್ಗಿಯರು ಹಿಂದೂ ಮಹಾಗಣಪತಿ ಹತ್ತಿರ ಆಗಮಿಸಲಿದ್ದಾರೆ.. ದಿನಾಂಕ: 10.09.2025 ರಂದು ಗಣ ಹೋಮ ನಡೆಯಲಿದೆ.ಈ ಹಿಂದೆ ಹಿಂದೂ ಮಹಾಗಣಪತಿ ಕಮಿಟಿಯಲ್ಲಿ ಕೆಲವು ಗೊಂದಲಗಳಿದ್ದವು ಅವುಗಳನ್ನು ಸಂಘದ ಪ್ರಮುಖರು ಬಂದು ಸರಿಪಡಿಸಿದ್ದಾರೆ.. ಈಗ ಯಾವುದೇ ಗೊಂದಲಗಳಿಲ್ಲ. ಎಂದ ಅವರು ಸರ್ಕಾರವು ಹಿಂದೂ ಹಬ್ಬಗಳಿಗೆ ವಿನಹ ಕಾರಣ ಮೂಗು ತೊರಿಸುತ್ತಾ ಕೆಲವೊಂದು ನಿಬಂಧನೆಗಳನ್ನು ಏರುತಿದೆ.. ಬೇರೆ ಧರ್ಮದವರು ದಿನಕ್ಕೆ ಐದು ಬಾರಿ ನಮಾಜ್ ಮಾಡಿದರೂ ಸಹ ಅವರಿಗೆ ಯಾವುದೇ ಕ್ರಮವಿಲ್ಲ.. ಆದರೆ ಹಿಂದೂ ಹಬ್ಬಗಳಿಗೆ ಡಿಜೆಗಳನ್ನು ಬಳಸದಂತೆ ನಿರ್ಬಂಧ ಏರುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದರು.
ಸರ್ಕಾರ ಗೋ ಹತ್ಯೆಗಳಂತಹ ಕಾನೂನು ಜಾರಿ ಮಾಡಿದೆ ಆದರೆ ಇದರ ಬಗ್ಗೆ ಯಾವುದೇ ಗಮನ ನೀಡದ ಸರ್ಕಾರ ಹಿಂದೂಗಳ ಹಬ್ಬಗಳ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ.ಡಿಜೆ ಇಲ್ಲದಿದ್ದರೂ ಸಹ ಶೋಭಯಾತ್ರೆ ಅದ್ದೂರಿಯಾಗಿ ನಡೆಯುತ್ತೆ.. ಆದರೆ ಹಿಂದೂ ಹಬ್ಬಗಳಿಗೆ ಏಕೆ ಈ ನಿಬಂಧನೆ.ಹಿಂದೂ ಹಬ್ಬಗಳಿಗೂ ಸಹ ಧ್ವನಿ ವರ್ಧಕಗಳನ್ನು ಬಳಸಲು ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತ್ಯದ ಸಂಚಾಲಕರಾದ ಪ್ರಭಂಜನ್, ವಿಶ್ವ ಹಿಂದು ಪರಿಷತ್ನ ಜಿಲ್ಲಾಧ್ಯಕ್ಷರಾದ ಷಡಾಕ್ಷರಪ್ಪ, ಕಾರ್ಯದರ್ಶಿ ಕೇಶವ ಭಾಗವಹಿಸಿದ್ದರು.