ತಿರುವನಂತಪುರಂ: ಹಿಂದೂಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಸಾಂಪ್ರದಾಯಿಕ ಉಡುಪುಗಳನ್ನು ಮಾತ್ರ ಧರಿಸಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು, ಎಲ್ಲೂ ಇಂಗ್ಲಿಷ್ ನಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಚೆರುಕೊಲ್ಪುಳದಲ್ಲಿ ಹಿಂದೂ ಸಮಾವೇಶದ ಭಾಗವಾಗಿ ನಡೆಯುತ್ತಿರುವ ‘ಹಿಂದೂ ಏಕತಾ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದ ಮೋಹನ್ ಭಾಗವತ್, ಹಿಂದೂ ಧರ್ಮ ಸತ್ಯ, ದಯೆ, ನೈರ್ಮಲ್ಯ ಮತ್ತು ಧ್ಯಾನ ಎಂಬ ನಾಲ್ಕು ಸ್ತಂಭಗಳ ಮೇಲೆ ಸ್ಥಾಪಿತವಾಗಿದೆ.
ನಾವು ಮಾತನಾಡುವ ಭಾಷೆ, ಪ್ರಯಾಣಿಸುವ ಸ್ಥಳಗಳು, ನಾವು ಧರಿಸುವ ಬಟ್ಟೆಗಳು ಸಂಪ್ರದಾಯಕ್ಕೆ ಹೋಲಿಕೆಯಾಗಿತ್ತಿದೆಯಾ ಎಂದು ಯೋಚಿಸಬೇಕು. ನಾವು ನಮ್ಮ ಸ್ವಂತ ಸ್ಥಳಗಳಿಗೆ ಪ್ರಯಾಣಿಸಬೇಕು, ನೆರವು ಅಗತ್ಯವಿರುವ ನಮ್ಮ ಸಹೋದರರನ್ನು ಭೇಟಿ ಮಾಡಬೇಕು. ನಾವು ಇಂಗ್ಲಿಷ್ ನಲ್ಲಿ ಮಾತನಾಡಬಾರದು, ನಮ್ಮ ಸ್ಥಳೀಯ ಆಹಾರಗಳನ್ನು ಮಾತ್ರ ಸೇವಿಸಬೇಕು. ಕಾರ್ಯಕ್ರಮಗಳಿಗೆ ಹಾಜರಾಗುವಾಗ ನಾವು ನಮ್ಮದೇ ಆದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು ಹೊರತು ಪಾಶ್ಚಿಮಾತ್ಯ ಉಡುಪುಗಳನ್ನಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಪರಿಸರ ಸಂರಕ್ಷಣೆಯಲ್ಲಿ ಹಿಂದೂ ಸಮುದಾಯ ಜವಾಬ್ಧಾರಿಯನ್ನು ಹೊಂದಿದೆ. ನೀರನ್ನು ಸಂರಕ್ಷಿಸಿ, ಸಸಿಗಳನ್ನು ನೆಡಬೇಕು, ಪ್ಲಾಸ್ಟಿಕ್ ಬಳಕೆಯನ್ನು ತಡೆಯಬೇಕು. ಇದು ಪ್ರತಿಯೋರ್ವ ಹಿಂದೂವಿನ ಕರ್ತವ್ಯ ಎಂದು ಮೋಹನ್ ಭಾಗವತ್ ಹೇಳಿದ್ದಾರೆ