ಚಿತ್ರದುರ್ಗ : 2025-26ನೇ ಸಾಲಿಗೆ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕ ಸಮರ್ಪಕ ವಸೂಲಾತಿಗಾಗಿ ನಗರಸಭೆ ಕಾರ್ಯಾಲಯ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮಹಿಳಾ ಸ್ವ-ಸಹಾಯ ಸಂಘವು ಈಗಾಗಲೇ ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಿರಬೇಕು ಹಾಗೂ ಪಂಚ ಸೂತ್ರಗಳನ್ನು ಅನುಸರಿಸುತ್ತಿರಬೇಕು. ಸಂಘದ ಸದಸ್ಯರು ಕನಿಷ್ಠ 7ನೇ ತರಗತಿಯವರೆಗೆ ಶಿಕ್ಷಣ ಹಾಗೂ ಎಲೆಕ್ಟ್ರಾನಿಕ್ ಪರಿಕರಗಳ ಬಳಕೆ ಗೊತ್ತಿರಬೇಕು. ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರಬೇಕು. ಬ್ಯಾಂಕಿನಲ್ಲಿ ತಮ್ಮ ಖಾತೆಯಲ್ಲಿ ಸಾಲ ಪಡೆದು ನಿಯಮಿತವಾಗಿ ಮರು ಪಾವತಿ ಮಾಡಿರಬೇಕು.
ಆಸಕ್ತ ಮಹಿಳಾ ಸ್ವ-ಸಹಾಯ ಸಂಘಗಳು ಹಿರಿಯೂರು ನಗರಸಭಾ ಕಾರ್ಯಾಲಯ ಕಚೇರಿಯಲ್ಲಿ ಡೇ-ನಲ್ಮ್ ಶಾಖೆಗೆ ಸಂಪರ್ಕಿಸಬೇಕು ಎಂದು ಹಿರಿಯೂರು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.