HMPV ಎಂಬ ಹೊಸ ವೈರಸ್ ಪ್ರಪಂಚದಾದ್ಯಂತ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ ಎಂಬ ಆತಂಕದ ಸುದ್ದಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ 6 ಮಕ್ಕಳಲ್ಲಿ HMPV ವೈರಸ್ ಕಾಣಿಸಿಕೊಂಡಿತ್ತು ಎಂಬ ಆಘಾತಕಾರಿ ಮಹಿತಿ ಬಹಿರಂಗವಾಗಿದೆ.
ಶಿವಮೊಗ್ಗದಲ್ಲಿ ನವೆಂಬರ್ ತಿಂಗಳಲ್ಲಿಯೇ 6 ಮಕ್ಕಳಲ್ಲಿ HMPV ವೈರಸ್ ಪತ್ತೆಯಾಗಿತ್ತು. 1 ಹಾಗೂ 2 ವರ್ಷದ ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿತ್ತು. 6 ಮಕ್ಕಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಎಲ್ಲಾ ಆರು ಮಕ್ಕಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಅಂದರೆ HMPV ವೈರಸ್ ದೇಶದಲ್ಲಿ ಆತಂಕಸೃಷ್ಟಿಸುವ ಮೊದಲೇ ಶಿವಮೊಗ್ಗದಲ್ಲಿ ಆರು ಮಕ್ಕಳಲ್ಲಿ ದೃಢಪಟ್ಟಿದ್ದು, ಇದೀಗ ಎಲ್ಲಾ 6 ಮಕ್ಕಳು ಗುಣಮುಖರಾಗಿ ಆರೋಗ್ಯದಿಂದ ಇದ್ದಾರೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ 6 ಮಕ್ಕಳಲ್ಲಿ HMPV ವೈರಸ್ ಸೋಂಕು ಕಾಣಿಸಿಕೊಂಡಿತ್ತು, ಮಕ್ಕಳು ಚಿಕಿತ್ಸೆ ಬಳಿಕ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾಗಿ ಹಾಗೂ ಸೋಂಕಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ