ಬೆಂಗಳೂರು: ಚೀನಾದಲ್ಲಿ HMPV ವೈರಸ್ ಪತ್ತೆಯಾಗಿದ್ದು, ಇದೀಗ ಇಂದು(ಜ.06) ಬೆಂಗಳೂರಲ್ಲಿ ಎರಡು HMPV ವೈರಸ್ ಪ್ರಕರಣ ಪತ್ತೆಯಾಗಿದೆ. ಎರಡೂ ಕೂಡ ಪಟ್ಟ ಕಂಮ್ಮಗಳಲ್ಲಿ ಪತ್ತೆಯಾಗಿದೆ.
ಹೆಣ್ಣು ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದೆ. ಪ್ರಕರಣ ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ವೈರಸ್ ಹೊಸದೇನಲ್ಲ. ಹೀಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದೆ. ಇಷ್ಟೇ ಅಲ್ಲ ರಾಜ್ಯದ ಜನತೆಗೆ ಮಾರ್ಗಸೂಚಿ ಪ್ರಕಟಿಸಿದೆ.
ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದು ಚರ್ಚೆ ಮಾಡಿದ್ದಾರೆ. ಇದೇ ವೇಳೆ ರಾಜ್ಯದ ಜನತೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಕುರಿತು ಮಾರ್ಗೂಚಿಯನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ದಿನೇಶ್ ಗುಂಡೂರಾವ್ ರಾಜ್ಯದ ಪ್ರಕರಣ ಕುರಿತು ಮಾತನಾಡಿದ್ದಾರೆ. ಚಳಿಗಾಲದಲ್ಲಿ ಈ ರೀತಿಯ ವೈರಸ್ ಕುರಿತು ಎಚ್ಚರಿಕೆ ಅಗತ್ಯ. ಇದು ಹೊಸದೇನಲ್ಲ. ಹಳೇ ವೈರಸ್. 2001ರಲ್ಲೇ ಈ ವೈರಸ್ ಪತ್ತೆಯಾಗಿದೆ. ಭಾರತದಲ್ಲೂ ಈ ವೈರಸ್ ಇದೆ. ಆದರೆ ಪರಿಣಾಕಾರಿಯಾಗಿಲ್ಲ. ಕೇವಲ ಶೇಕಡಾ 1 ರಷ್ಟು ಮಾತ್ರ ತೀವ್ರತೆ ಇದೆ ಅನ್ನೋ ಮಾಹಿತಿ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಮ್ಯುನಿಟಿ ಕಡಿಮೆ ಇರುವ ಮಕ್ಕಳಿಗೆ ಬೇಗನೆ ಈ ವೈರಸ್ ದಾಳಿ ಮಾಡಲಿದೆ. ಮಕ್ಕಳು ಹಾಗೂ ಹಿರಿಯರು ತೀವ್ರ ಮುಂಜಾಗ್ರತೆ ವಹಿಸಬೇಕು. ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡ್ತೇವೆ, ಸದ್ಯ ರಾಜ್ಯದ ಪ್ರಕರಣದ ಸ್ಯಾಂಪಲ್ ಪುಣೆಗೆ ಕಳುಹಿಸುವ ಕುರಿತು ಚರ್ಚಿಸುತ್ತೇವೆ ಎಂದು ದಿನೇಶ್ ಗಂಡೂರಾವ್ ಹೇಳಿದ್ದಾರೆ. ಇದೇ ವೇಳೆ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದಿದ್ದಾರೆ.
ಚೀನಾದಲ್ಲಿ ವರದಿಯಾಗಿರುವ HMPV ವೈರಸ್ ಪ್ರಕರಣದ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಉಸಿರಾಟ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವ HMPV ವೈರಸ್ ಸಾಮಾನ್ಯವಾಗಿ ಮಕ್ಕಳು ಹಾಗೂ ಹಿರಿಯಲ್ಲಿ ಹೆಚ್ಚಾಗಿ ಕಾಣಿಸಲಿದೆ. ಸದ್ಯದ ಪ್ರಕರಣಗಳ ಕುರಿತು ರಾಜ್ಯ ಆರೋಗ್ಯ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವೈರಸ್ ಕುರಿತು ಮುಂಜಾಗ್ರತೆಗಾಗಿ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ