ಚಿತ್ರದುರ್ಗ; ರಾಜ್ಯದಲ್ಲಿ ಫೆಂಗಲ್ ಸೈಕ್ಲೋನ್ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮುಂಜಾಗರೂಕತಾ ಕ್ರಮವಾಗಿ ಇಂದು ಅನೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಇದೀಗ ಚಿತ್ರದುರ್ಗದಲ್ಲೂ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ ಅನುದಾನರಹಿತ ಶಾಲೆಗಳಿಗೆ ರಜೆ ನೀಡಲಾಗಿದೆ. ಪದವಿ ಪೂರ್ವ, ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿವೆ. ಮುಂದಿನ 2 ಶನಿವಾರ ಪೂರ್ಣ ತರಗತಿ ನಡೆಸುವ ಮೂಲಕ ಈ ರಜೆಯನ್ನು ಸರಿದೂಗಿಸಲು ಸೂಚಿಸಲಾಗಿದೆ.