ಪ್ರಯಾಗ್‌ರಾಜ್ :ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಧುಗಳ ಜೊತೆಗೆ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಅವರು ಬಡೇ ಹನುಮಾನ್ ಜಿ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಲಿದ್ದಾರೆ. ನಂತರ ಜುನಾ ಅಖಾರಕ್ಕೆ ತೆರಳಿ ಮಹಾರಾಜರು ಮತ್ತು ಅಖಾರದ ಇತರ ಸಂತರನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸೇವಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಫೆ. 5 ರಂದು ಪವಿತ್ರ ಸ್ನಾನ ಮಾಡಲಿದ್ದಾರೆ.