ಮಂಗಳೂರು: ಸುಳ್ಳು ಸುದ್ದಿ ಹರಡುವುದು ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸಭೆಯನ್ನು ನಾವು ಯಾವುದೇ ದುರುದ್ದೇಶದಿಂದ ಕರೆದಿಲ್ಲ ಅಥವಾ ದ.ಕ ಜಿಲ್ಲೆಗೆ ಯಾವುದೇ ಲೇಬಲ್ ಹಚ್ಚಲು ನಾವು ಕರೆದಿಲ್ಲ. ಇತಿಹಾಸ ನೋಡಿದ್ರೆ ಇಡೀ ರಾಜ್ಯದಲ್ಲಿ ದ.ಕ ಜಿಲ್ಲೆಯಂಥ ಜಿಲ್ಲೆ ಮತ್ತೊಂದಿಲ್ಲ. ನೀವು ಬುದ್ದಿವಂತರು ಮಾತ್ರವಲ್ಲ, ಬಹಳಷ್ಟು ಕ್ರಿಯಾಶೀಲರು, ಪ್ರಪಂಚದ ಯಾವುದೇ ಮೂಲೆಯಲ್ಲಿ ಬದುಕಬಹುದಾದ ಚಾಕಚಕ್ಯತೆ ಉಳ್ಳವರು. ಇಡೀ ದೇಶದ ಶಿಕ್ಷಣ ವ್ಯವಸ್ಥೆನ್ನ ನಿಯಂತ್ರಣ ಮಾಡೋರು ನೀವು, ಎಂದು ಮಂಗಳೂರು ಶಾಂತಿ ಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರಾವಳಿಯನ್ನು ಹಾಡಿ ಹೊಗಳಿದ್ದಾರೆ. ಲಕ್ಷಾಂತರ ಜನರು ವಿದ್ಯಾರ್ಥಿಗಳು ಇಲ್ಲಿ ಕಲಿತು ಹೋಗಿ ಜೀವನ ಕಟ್ಟುಕೊಂಡಿದ್ದಾರೆ. ದೇಶದ ಮೊದಲ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ಕೊಡುಗೆ ಕೊಟ್ಟ ಜಿಲ್ಲೆ ದ.ಕ. ಸುಮಾರು 58 ಜನರು ಇಂದು ತಮ್ಮ ಅಭಿಪ್ರಾಯ ಹೇಳಿದ್ದೀರಿ. ಬಹಳಷ್ಟು ಜನರು ಒಳ್ಳೆಯ ಸಲಹೆ ಕೊಟ್ಟಿದ್ದೀರಿ, ಸರ್ಕಾರದ ಜವಾಬ್ದಾರಿ ತಿಳಿಸಿದ್ದೀರಿ. ಹರೀಶ್ ಪೂಂಜಾ, ಭರತ್ ಶೆಟ್ಟಿ, ಕಾಮತ್ ಸತ್ಯ ಹೇಳಿದ್ದೀರಿ ಇದೊಂದು ಸೈದ್ಧಾಂತಿಕ ಜಗಳ ಅಂತ ನಿಜವಾದ ಸತ್ಯ ಹೇಳಿದ್ದೀರಿ, ಆದರೆ ನಮ್ಮ ಮಕ್ಕಳು ಇಂಥ ಭಯದಲ್ಲೇ ಬದುಕಬೇಕಾ? ನಾನು ನೆಹರೂ ಮೈದಾನಕ್ಕೆ ಚಿಕ್ಕಂದಿನಲ್ಲಿ ಅಶ್ಲೀಟ್ ಆಗಿ ಬಂದಿದ್ದೆ, ಆಗ ಯಾರೂ ಇಲ್ಲಿ ಹಿಂದೂ ಮುಸ್ಲಿಂ ಅಂದಿದ್ದನ್ನ ನಾನು ನೋಡಿಲ್ಲ. ಹಾಗಾಗಿ ಇತಿಹಾಸ ಸ್ಮರಿಸಿಕೊಳ್ಳಿ, ದ.ಕ ಜಿಲ್ಲೆಯ ಅವಶ್ಯಕತೆ ಇದೆ. ನಾವು ನಿಮ್ಮ ಸಲಹೆಗಳನ್ನು ತೆಗೆದುಕೊಂಡು ಚರ್ಚೆ ಮಾಡಬೇಕಿದೆ. ಆ ಬಳಿಕ ಏನೆಲ್ಲಾ ಕ್ರಮ ವಹಿಸಬೇಕೋ ಅದನ್ನ ವಹಿಸ್ತೇನೆ. ಮುಖ್ಯಮಂತ್ರಿಗಳು ಸದನದಲ್ಲೇ ಡ್ರಗ್ಸ್ ವಿರುದ್ಧ ಯುದ್ಧ ಸಾರಿದ್ದಾರೆ. ನಾವು ಯಾವುದೇ ಕಾರಣಕ್ಕೂ ಮತ್ತೊಂದು ಉಡ್ತಾ ಪಂಜಾಬ್ ಆಗಲು ಬಿಡಲ್ಲ. ಮಂಗಳೂರು ಕಮಿಷನರ್, ಎಸ್ಟಿಗೂ ಅದನ್ನ ಖಡಕ್ ಆಗಿ ಹೇಳಿದ್ದೇನೆ.
