ಬೆಂಗಳೂರು: ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದ ಪೊಲೀಸರಿಗೆ ಹೆಚ್ಚಿನ ರಜೆ ಇರುವುದಿಲ್ಲ ಅಂತ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಸದ್ಯ ಪೊಲೀಸರಿಗೆ ಯಾವುದೇ ಹೆಚ್ಚುವರಿ ರಜೆಯನ್ನು ನೀಡುವುದಿಲ್ಲ ಅಂತ ತಿಳಿಸಿದ ಅವರು ಯಾವಾಗ ಏನು ಆಗುತ್ತದೋ ಯಾರಿಗೂ ತಿಳಿದಿಲ್ಲ, ಕೋಸ್ಟಲ್ ಗಾರ್ಡ್ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಅಂತ ಅವರು ಇದೇ ವೇಳೇ ತಿಳಿಸಿದರು.
ಕರ್ನಾಟಕದಲ್ಲಿ ಮುಂಜಾಗ್ರತ ಕ್ರಮವಾಗೀ ರಾಜ್ಯ ಸರ್ಕಾರ ಕೈಗೊಂಡಿದ್ದು, ಕೇಂದ್ರ ಸರ್ಕಾರದ ಸೂಚನೆಗಳಿಗೆ ಅನುಗುಣವಾಗಿ ಎಲ್ಲಾ ರೀತಿಯಲ್ಲಿ ಸಿದ್ದತೆಗಳನ್ನು ರಾಜ್ಯ ಗೃಹ ಇಲಾಖೆ ಮಾಡಿಕೊಂಡಿದೆ.