ಬೆಂಗಳೂರು: ಬಿ-ಖಾತಾ ನಿವೇಶನ, ಕಟ್ಟಡಗಳಿಗೆ ಮತ್ತು ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕೃತ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಎ-ಖಾತಾ ಸೌಲಭ್ಯ ಸಿಗಲಿದೆ. ಕಾಯ್ದೆ 1961 ಅನ್ನು ಉಲ್ಲಂಘಿಸಿ ನಿರ್ಮಿಸಿರುವ ಅಧಿಕೃತ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಮಾತ್ರ ಖಾತಾ ಪರಿವರ್ತನೆಗೆ ಅವಕಾಶ ನೀಡಲಾಗುತ್ತದೆ.
ಜೊತೆಗೆ ಸುಮಾರು 10 ಲಕ್ಷ ಬಿ ಖಾತಾ ಆಸ್ತಿಗಳಿವೆ. ಜಿಬಿಎ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಯಮಗಳನ್ನೇ ಉಳಿದ ಕಡೆಗಳಿಗೂ ಅನ್ವಯಿಸಲಾಗುವುದು ಎನ್ನಲಾಗಿದೆ. ಒತ್ತುವರಿ ಮತ್ತು ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಎ ಖಾತಾ ನೀಡಲು ಮಾನದಂಡವೇನು?
ಅಪಾರ್ಟ್‌ಮೆಂಟ್ ಈ ವರ್ಷದ ಅಸ್ತಿ ತೆರಿಗೆ ಪಾವತಿ ಮಾಡಿರಬೇಕು.
ಅಪಾರ್ಟ್ಮೆಂಟ್ಗೆ ನಕ್ಷೆ ಇರಬೇಕು.
ಸರ್ಕಾರ ಸೂಚಿಸಿದ ಮಾರ್ಗಸೂಚಿ ದರದ ಶೇಕಡಾ 5ರಷ್ಟು ಹಣ ಪಾವತಿ ಮಾಡಬೇಕು.
ಅಪಾರ್ಟ್‌ಮೆಂಟ್ ಲ್ಯಾಂಡ್ಗೆ ಬಿ ಖಾತಾ ಇರಬೇಕು.
ಅಪಾರ್ಟಮೆಂಟ್ ಮಾಲೀಕರು ವೈಯಕ್ತಿಕವಾಗಿ ಇ ಖಾತಾಗೆ ಅಪ್ಲೈ ಮಾಡಬೇಕು.
ನಕ್ಷೆ ಮೀರಿ ಕಟ್ಟಡ ನಿರ್ಮಾಣ ಮಾಡಿದ್ರೆ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಹಣ ಪಾವತಿ ಮಾಡಬೇಕು.
ಅನ್ಲೈನ್ ಮುಖಾಂತರ ಇ ಖಾತಾಗೆ ಅರ್ಜಿ ಸಲ್ಲಿಸಬಹುದು.
ಸಲ್ಲಿಕೆ ಮಾಡಿದ ದಾಖಲೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಖಾತಾ ವಿತರಣೆ ಮಾಡುತ್ತಾರೆ.!
































