ಭಾರತೀಯ ರೈಲ್ವೆ ಇಲಾಖೆಯೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ಹೊಸ ಪ್ರಯೋಗ ಮಾಡುತ್ತಿರುತ್ತದೆ. ಈ ಪ್ರಯೋಗಗಳಲ್ಲಿ ರೈಲ್ವೆ ಇಲಾಖೆ ಯಶಸ್ವಿ ಕೂಡ ಆಗುತ್ತಿರುತ್ತದೆ. ಅದರಂತೆ ಇದೀಗ ಚಲಿಸುತ್ತಿರುವ ರೈಲ್ವೆಯಲ್ಲಿ ಎಟಿಎಂ ಇರಿಸಿ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಸಕ್ಸಸ್ ಆಗಿದೆ.
ಇಷ್ಟು ದಿನ ರಸ್ತೆಗಳ ಬದಿಯಲ್ಲಿ ಇರುವ ಎಟಿಎಂಗಳಲ್ಲಿ ಜನರು ಹಣ ತೆಗೆದುಕೊಳ್ಳುತ್ತಿದ್ದರು. ಇನ್ನು ಮೇಲೆ ಟ್ರ್ಯಾಕ್ ಮೇಲೆ ಚಲಿಸುವ ಟ್ರೈನ್ನಲ್ಲೂ ಎಟಿಎಂಗಳಿಂದ ಹಣ ಡ್ರಾ ಮಾಡಬಹುದು. ಹೌದು ಇಂತಹದೊಂದು ವಿನೂತನ ಕಾರ್ಯವನ್ನು ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಚಯಿಸಿದೆ.
ರೈಲ್ವೆಯ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ನಡುವಿನ ಸಹಭಾಗಿತ್ವದಲ್ಲಿ ಮುಂಬೈಯಿಂದ ನಾಸಿಕ್ನ ಮನ್ಮಾಡ್ವರೆಗೆ ಸಂಚಾರ ಮಾಡುವ ಪಂಚವಟಿ ಎಕ್ಸ್ಪ್ರೆಸ್ ರೈಲ್ವೆಯ ಎಸಿ ಕೋಚ್ನ ಒಳಗೆ ಎಟಿಎಂ ಇರಿಸಲಾಗಿದೆ. ಪ್ರಯಾಣಿಸುವ ಸಮಯದಲ್ಲಿ ಹಣದ ಅವಶ್ಯಕತೆ ಇದ್ದರೇ ಪ್ರಯಾಣಿಕರು ಹಣ ಡ್ರಾ ಮಾಡಿಕೊಳ್ಳಬಹುದು.