ಬೇಕಾಗುವ ಪದಾರ್ಥಗಳು…
- ಗೆಣಸು- ಅರ್ಧ ಕೆಜಿ
- ತೊಗರಿಬೇಳೆ- 1 ಕೆಜಿ
- ಬೆಲ್ಲ- 750 ಗ್ರಾಂ
- ಮೈದಾ ಹಿಟ್ಟು- ಅರ್ಧ ಕೆಜಿ
- ಎಣ್ಣೆ- ಸ್ವಲ್ಪ
- ಅರಿಶಿಣ-ಸ್ವಲ್ಪ
- ಏಲಕ್ಕಿ ಪುಡಿ-ಸ್ವಲ್ಪಮಾಡುವ ವಿಧಾನ…
- ಮೈದಾಹಿಟ್ಟಿಗೆ ಒಂದು ಸ್ಪೂನ್ ಅರಿಶಿಣ ಸೇರಿಸಿ, ಎಣ್ಣೆ ಹಾಕಿ ಕಣಕದ ಹದಕ್ಕೆ ಕಲಸಿಟ್ಟುಕೊಳ್ಳಿ.
- ಗೆಣಸು ತೊಳೆದು ಬೇಯಿಸಿ, ಸಿಪ್ಪೆ ತೆಗೆದಿಟ್ಟುಕೊಳ್ಳಿ. ಬಳಿಕ ಬೇಳೆಯನ್ನು ಮೆದುವಾಗಿ ಬೇಯಿಸಿ, ನೀರು ತೆಗೆದು ಬೇಳೆಗೆ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕುದಿಸಿ.
- ಬಳಿಕ ಬೆಂದ ಬೇಳೆ, ಗೆಣಸನ್ನು ಒಟ್ಟಿಗೆ ನುಣ್ಣಗೆ ಉಂಡೆ ಕಟ್ಟಲು ಬರುವಷ್ಟು ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಹೂರಣವನ್ನು ಲಿಂಬು ಗಾತ್ರ ಮಾಡಿಕೊಂಡು ಕಣಕದಲ್ಲಿ ತುಂಬಿ ಬಾಳೆ ಎಲೆಯ ಮೇಲಿಟ್ಟು ಎಣ್ಣೆ ಹಾಕಿ ನಿಧಾನಕ್ಕೆ ಲಟ್ಟಿಸಿ.
- ನಂತರ ಒಲೆಯ ಮೇಲೆ ತವದ ಇಟ್ಟು ಚಿಕ್ಕ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿ. ಇದೀಗ ರುಚಿಕರವಾದ ಸಿಹಿ ಗೆಣಸಿನ ಹೋಳಿಗೆ ಸವಿಯಲು ಸಿದ್ಧ.