ಮುಂದಿನ ತಿಂಗಳು ಎಸ್‌ಎಸ್‌ಎಲ್ಲಿ ಪರೀಕ್ಷೆ ಬರಲಿದ್ದು, ಅನೇಕರಿಗೆ ಪರೀಕ್ಷೆ ಅಂದರೆ ಭಯ, ಆತಂಕ ಇದ್ದೇ ಇರುತ್ತದೆ.
ಅಂಥವರಿಗೆ ಕೆಲವು ಟಿಪ್ಸ್ ಇಲ್ಲಿದೆ. ನಿರಂತರವಾಗಿ ಏಕಾಗ್ರತೆಯಿಂದ ಒಂದಿಷ್ಟು ಹೊತ್ತು ಅಧ್ಯಯನಕ್ಕೆ ಮೀಸಲಿಡುವುದು ಪರೀಕ್ಷೆಯ ದಿನಗಳಲ್ಲಿ ಆತಂಕವನ್ನು ದೂರಮಾಡುತ್ತದೆ.
ಯಾವ ವಿಷಯಗಳ ಮೇಲೆ ಗಮನವಿಟ್ಟು ಓದಬೇಕು, ಯಾವುದಕ್ಕೆ ಮಹತ್ವ ನೀಡಬೇಕು ಎಂದು ನಿಮ್ಮ ಪ್ರೊಫೆಸರ್ ಬಳಿ ಕೇಳಿ ತಿಳಿದುಕೊಳ್ಳಿ.
ಆದಷ್ಟು ಮೊಬೈಲ್ ಫೋನ್ ಬಳಸದಿರಿ, ಅದರಲ್ಲೂ ಸೋಶಿಯಲ್ ಮೀಡಯಾ ಬಳಕೆಗೆ ಒಂದತ ದಿನ ಕಡಿವಾಣ ಹಾಕಿ.