ಲಖನೌ : ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಮಧ್ಯಪ್ರದೇಶದಲ್ಲಿ ಎಸ್‌ಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ವಿಫಲವಾದ ನಂತರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದು 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟದಲ್ಲಿ ಬಿರುಕು ಗೋಚರಿಸುವ ಲಕ್ಷಣಗಳು ಕಂಡಿವೆ. ಅಖಿಲೇಶ್ ಯಾದವ್ ಅವರ ಗೂಢಾರ್ಥದ ಟ್ವೀಟ್ ಹೌದು ಭಾನುವಾರ ಟ್ವೀಟ್ ಮಾಡಿರುವ ಅಖಿಲೇಶ್, ‘2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ನೇತಾಜಿ ಮುಲಾಯಂ ಸಿಂಗ್ ಯಾದವ್ ಅಮರರಾಗಿರುತ್ತಾರೆ. ಪಿಡಿಎ (ಪಿಛಡೇ, ದಲಿತ ಹಾಗೂ ಅಲ್ಪಸಂಖ್ಯಾತ) ಕೂಟವು ಚುನಾವಣೆಯಲ್ಲಿ ವಿಜಯಶಾಲಿಯಾಗಲಿದೆ. ಅಖಿಲೇಶ್ ಯಾದವ್ ಬಡವರಿಗೆ ನ್ಯಾಯ ಒದಗಿಸಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಇಂಡಿಯಾ ಕೂಟ ಗೆಲ್ಲಲಿದೆ ಎಂಬ ಬದಲು ಪಿಡಿಎ ಗೆಲ್ಲಲಿದೆ ಎಂದು ಅಖಿಲೇಶ್ ಮಾಡಿದ ಟ್ವೀಟ್ ನಾನಾ ಊಹಾಪೋಹಕ್ಕೆ ನಾಂದಿ ಹಾಡಿದ್ದು, ಅವರು ಇಂಡಿಯಾ ಕೂಟ ತೊರೆಯಬಹುದು ಎಂಬ ಸುದ್ದಿಗಳಿಗೆ ಪುಷ್ಠಿ ನೀಡಿದೆ.