ಬೆಂಗಳೂರು : ‘ನನಗೆ ಲಾಯರ್ ಆಗಬೇಕು ಎಂಬ ಆಸೆ ಇತ್ತು, ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಭಾರತದ ಸಂವಿಧಾನ ಅಂಗೀಕಾರ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ತಾವು ಲಾಯರ್ ಆಗಬೇಕಿತ್ತು ಎಂಬ ಆಸೆಯನ್ನ ತಮ್ಮ ಭಾಷಣದಲ್ಲಿ ಬಿಚ್ಚಿಟ್ಟರು.
ನಾನು ಲಾಯರ್ ಆಗಬೇಕು ಎಂಬ ಆಸೆ ಇತ್ತು, ಆದ್ರೆ ನಾನು ಡಿಗ್ರಿ ಫೈನಲ್ ಇಯಾರ್ ಇದ್ದಾಗ ನನಗೆ ವಿಧಾನಸಭೆ ಟಿಕೆಟ್ ಸಿಗ್ತು. ಹೀಗಾಗಿ ನಾನು ಲಾಯರ್ ಓದೋಕೆ ಆಗಲಿಲ್ಲ. ಈಗ ದಿನ ಎದ್ರೆ ಸಿಬಿಐ, ಐಟಿ, ಇಡಿ ನೋಟಿಸ್ ಬರುತ್ತೆ ಹೀಗಾಗಿ ನನ್ನ ಮಗನಿಗೆ ಲಾಯರ್ ಓದಿಸುತ್ತಿದ್ದೇನೆ ನಂಗೆ ಬರೋ ನೋಟಿಸ್ ಓದು ಸಾಕು ಎಂದರು. ಡಿಕೆಶಿ ಹೇಳಿಕೆಗೆ ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲ ನಗೆಗಡಲಲ್ಲಿ ತೇಲಿದರು.