ಹಮಾಸ್ನ ಒತ್ತೆಯಾಳಾಗಿ ಇದ್ದ ಸಂದರ್ಭದಲ್ಲಿ ಕೂಡ ನನಗೆ ನಿರೀಕ್ಷೆ ಇತ್ತು, ಆದರೆ ಈಗ ನಾನು ಕತ್ತಲೆಯಲ್ಲಿದ್ದೇನೆ ಎಂದು ಹಮಾಸ್ ಒತ್ತೆಯಿಂದ ಬಿಡುಗಡೆಗೊಂಡು ಇಸ್ರೇಲ್ನಲ್ಲಿರುವ ಮಿಯಾ ಶೀಮ್ ಚಾನೆಲ್ 12ಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹೇಳಿಕೆ ಇಸ್ರೇಲ್ನಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
ಟೆಲ್ ಅವಿವುನಲ್ಲಿ ಪ್ರಸಿದ್ಧನಾಗಿರುವ ಫಿಟ್ನೆಸ್ ಟ್ರೈನಿಯ ವಿರುದ್ಧ ಈಕೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.
ಆರು ವಾರಗಳ ಮೊದಲು ಈ ಲೈಂಗಿಕ ಕಿರುಕುಳ ಘಟನೆ ನಡೆದಿದೆ. ಈಕೆಯ ದೂರಿನ ಅನ್ವಯ ಪೊಲೀಸರು ಫಿಟ್ನೆಸ್ ಟ್ರೈನಿಯನ್ನು ಬಂಧಿಸಿದ್ದರೂ ಆ ಬಳಿಕ ಬಿಡುಗಡೆಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಮಿಯಾ ಶಿಮ್ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಮಾಸ್ ನ ಕೈಯಲ್ಲಿ ತಾನು ಸುರಕ್ಷಿತವಾಗಿದ್ದೆ. ಅಲ್ಲಿ ತನಗೆ ನಿರೀಕ್ಷೆ ಇತ್ತು, ಆದರೆ ಈಗ ನಾನು ಕತ್ತಲಲ್ಲಿ ಇದ್ದೇನೆ ಎಂದು ಆಕೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.