ಉತ್ತರ ಪ್ರದೇಶ : ಯುಪಿಎಸ್ಸಿ ಪರೀಕ್ಷೆಯು ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಅನೇಕ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತರಬೇತಿ ಪಡೆಯುತ್ತಾರೆ. ಆದರೆ ಕೆಲವರು ತರಬೇತಿ ಪಡೆಯದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ತರಬೇತಿ ಪಡೆಯದೇ ಉತ್ತೀರ್ಣರಾದವರಲ್ಲಿ ಐಎಎಸ್ ಅಧಿಕಾರಿ ಆಸ್ಥಾ ಸಿಂಗ್ ಅವರು ಕೂಡ ಒಬ್ಬರು.
ಪಂಜಾಬ್ನ ಪಂಚಕುಲದವರಾದ ಆಸ್ಥಾ ಸಿಂಗ್ ಅವರ ಕುಟುಂಬದ ಪೂರ್ವಜರ ಮನೆ ಉತ್ತರ ಪ್ರದೇಶದ ಜಾನ್ಪುರ ಜಿಲ್ಲೆಯ ಕುಶಾಹಾ ಕಾನೌರಾ ಗ್ರಾಮದಲ್ಲಿದೆ. ಆಸ್ಥಾ ಅವರ ತಂದೆ ಬ್ರಿಜೇಶ್ ಸಿಂಗ್ ಅವರು ಔಷಧೀಯ ಕಂಪನಿಯೊAದರಲ್ಲಿ ಗುಣಮಟ್ಟ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅವರ ತಾಯಿ ಶಾಲಿನಿ ಸಿಂಗ್ ಗೃಹಿಣಿ.ಪಂಚಕುಲದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಆಸ್ಥಾ, 11 ಮತ್ತು 12 ನೇ ತರಗತಿಗಳಲ್ಲಿ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡಿದ್ದರು. ನಂತರ ದೆಹಲಿಗೆ ತೆರಳಿದ ಅವರು, ಅಲ್ಲಿ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ದೆಹಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ (ಗೌರವ) ಪದವಿ ಪಡೆದರು.ಈ ವೇಳೆ ಆಸ್ಥಾ ಅವರು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುವ ಹಂಬಲ ಹೊಂದಿದ್ದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಅರ್ಥಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಲು ಅನುಕೂಲವಾಗುವಂತೆ ಅವರು ಪದವಿಯಲ್ಲಿ ಅರ್ಥಶಾಸ್ತ್ರವನ್ನು ಆರಿಸಿಕೊಂಡರು. ಯುಪಿಎಸ್ಸಿ ಪರೀಕ್ಷೆಯ ಜೊತೆಗೆ, ಅವರು ತಮ್ಮ ಅಜ್ಜನ ಕನಸನ್ನು ಈಡೇರಿಸಲು ಸರ್ಕಾರಿ ಪರೀಕ್ಷೆಗಳಿಗೂ ತಯಾರಿ ಆರಂಭಿಸಿದರು.ಆಸ್ಥಾ ಅವರು ಹರಿಯಾಣ ಸಾರ್ವಜನಿಕ ಸೇವಾ ಆಯೋಗದ (ಹೆಚ್ಪಿಎಸ್ಸಿ) ಪರೀಕ್ಷೆಯನ್ನು ತೆಗೆದುಕೊಂಡು 2024 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಅದನ್ನು ಪಾಸು ಮಾಡಿದರು. ಅವರು 31 ನೇ ಶ್ರೇಯಾಂಕವನ್ನು ಗಳಿಸಿದರು ಮತ್ತು ಹರಿಯಾಣ ಸರ್ಕಾರದಲ್ಲಿ ಹೆಚ್ಚುವರಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಯಾಗಿ ಆಯ್ಕೆಯಾದರು.ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆಯಲು ಆಸ್ಥಾ ಅವರು ತಯಾರಿ ನಡೆಸುತ್ತಾರೆ. 2024 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 61ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ತಮ್ಮ 21 ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗಿ ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.
