ನವದೆಹಲಿ : ಕಠಿಣ ಪರಿಶ್ರಮ ಮತ್ತು ಸಾಧಿಸುವ ಗುರಿಯೊಂದಿದ್ದರೆ ಆಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದು, ಜೀವನದಲ್ಲಿ ಬರುವ ಅಡತಡೆಗಳನ್ನು ಮೆಟ್ಟಿ ನಿಲ್ಲುವ ಮೂಲಕ ಯಶಸ್ಸು ಸಾಧಿಸಬಹುದಾಗಿದೆ. ತನ್ನ ಕಠಿಣ ಪರಿಶ್ರಮದಿಂದಲೇ ಐಎಎಸ್ ಅಧಿಕಾರಿಯಾಗಿದ್ದಾರೆ.10 ನೇ ತರಗತಿಯಲ್ಲಿ ಜಸ್ಟ್ ಪಾಸ್ ಆಗಿದ್ದ ಈ ವ್ಯಕ್ತಿ ಬರೋಬ್ಬರಿ 10 ಪ್ರಯತ್ನಗಳ ಬಳಿಕ UPSC ಎಕ್ಸಾಂ ಪಾಸ್ ಮಾಡಿ IAS ಅಧಿಕಾರಿಯಾಗಿದ್ದಾರೆ. ಇವರ ಈ ಯಶಸ್ಸಿನ ಕಥೆ ನಿಜಕ್ಕೂ ಸ್ಪೂರ್ತಿದಾಯಕ.
10 ನೇ ತರಗತಿಯಲ್ಲಿ ಕೇವಲ ಶೇ.40% ಅಂಕ ಗಳಿಸಿ, ತನ್ನ ಕಠಿಣ ಪರಿಶ್ರಮದಿಂದಲೇ ಇಂದು ಐಎಎಸ್ ಅಧಿಕಾರಿಯಾದ ಅವನೀಶ್ ಶರಣ್ ಅವರ ಸಕ್ಸಸ್ ಸ್ಟೋರಿ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ಬಿಹಾರದ ಅವನೀಶ್ ಹತ್ತನೇ ತರಗತಿಯಲ್ಲಿ ಕೇವಲ 44% ಅಂಕವನ್ನು ಪಡೆದು ಜಸ್ಟ್ ಪಾಸ್ ಆಗಿದ್ದರು. ಇನ್ನೂ ದ್ವಿತೀಯ ಪಿಯುಸಿಯಲ್ಲಿ 65% ಅಂಕವನ್ನು ಗಳಿಸಿದ ಇವರಿಗೆ ನಾಗರಿಕ ಸೇವಾ ಹುದ್ದೆಗಳಿಗೆ ಸೇರುವ ಕನಸಿತ್ತು. ಸತತ 10 ಬಾರಿ ಫೇಲ್ ಆಗಿ ಸತತ ಪರಿಶ್ರಮದ ಬಳಿಕ ಯುಪಿಎಸ್‌ಸಿ ಎಕ್ಸಾಂ ಪಾಸ್ ಮಾಡುವ ಮೂಲಕ ಐಎಎಸ್ ಅಧಿಕಾರಿಯಾದರು.
ಅವನೀಶ್ ಅವರ ಈ ಪ್ರಯಾಣವು ಅತ್ಯಂತ ಸವಾಲಿನದ್ದಾಗಿತ್ತು. ಅವನೀಶ್ ಅವರು ಸಿಡಿಎಸ್ ಮತ್ತು ಸಿಪಿಎಫ್ ಪರೀಕ್ಷೆಗಳಲ್ಲಿಯೂ ಅನುತ್ತೀರ್ಣರಾದರು ಮತ್ತು ರಾಜ್ಯ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯಲ್ಲಿ ಹತ್ತು ಬಾರಿ ಅನುತ್ತೀರ್ಣರಾದರು. ಆದರೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ, ಛಲ ಎಂದಿಗೂ ಕುಗ್ಗಲಿಲ್ಲ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಅವರು ಸಂದರ್ಶನ ಸುತ್ತಿನವರೆಗೂ ತಲುಪಿ ಅಲ್ಲಿ ಅನುತ್ತೀರ್ಣರಾದರು. ನಂತರ ಅವರು ಎರಡನೇ ಪ್ರಯತ್ನದಲ್ಲಿ ಅಖಿಲ ಭಾರತ ಶ್ರೇಣಿ AIR 77 ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು.
ಪ್ರಸ್ತುತ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ತನ್ನ ಪ್ರಯಾಣದಲ್ಲಿ ಹಲವು ಅಡೆತಡೆಗಳನ್ನು ಎದುರಿಸಿ ಕೊನೆಗೆ ಛಲ ಬಿಡದೆ ತನ್ನ ಗುರಿ ತಲುಪಿದ ಅವನೀಶ್ ಅವರ ಕಥೆ ಎಲ್ಲರಿಗೂ ಸ್ಪೂರ್ತಿ ಅಂದರೆ ತಪ್ಪಗಲಾರದು.