ತೆಲಂಗಾಣ : ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ಐಎಎಸ್ ಅಧಿಕಾರಿ ಶೋಭಿಕಾ ಪಾಠಕ್ ಅವರ ಯಶೋಗಾಥೆಯೇ ಸಾಕ್ಷಿ.
ಬೆಂಗಳೂರಿನ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಶೋಭಿಕಾ ಅವರು ಶಾಲಾ ಶಿಕ್ಷಣ ಪೂರೈಸಿದರು. 2013ರಲ್ಲಿ ವಾರಂಗಲ್‌ನ ಎನ್‌ಐಟಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದರು.
ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಶೋಭಿಕಾ ಅವರ ಕನಸಾಗಿತ್ತು. ಈ ಹಿನ್ನೆಲೆ ಶೋಭಿಕಾ ಅವರು ಇನ್ಕಮ್ ಟ್ಯಾಕ್ಸ್ ಅಧಿಕಾರಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದರೂ, ಅವರು ತಮ್ಮ ಸತತ ಪ್ರಯತ್ನ ಮುಂದುವರಿಸಿದರು.
ಶೋಭಿಕಾ ಅವರು 2020ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ 248ನೇ ರ‍್ಯಾಂಕ್ ಗಳಿಸಿ ಐಆರ್‌ಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ಆದಾಯ ತೆರಿಗೆ ಇಲಾಖೆ ಸೇರಿದರು. ಐಆರ್‌ಎಸ್ ಅಧಿಕಾರಿಯಾದರೂ ಶೋಭಿಕಾ ಅವರ ಮನಸ್ಸು ಐಎಎಸ್ ಕಡೆಗೆ ಇತ್ತು.
ತಮ್ಮ ಕನಸನ್ನು ನನಸಾಗಿಸಿಕೊಳ್ಳಲು, ಶೋಭಿಕಾ ಅವರು 2024ರ ಯುಪಿಎಸ್‌ಸಿ ಪರೀಕ್ಷೆ ಬರೆದರು. ಅವರು 37ನೇ ರ‍್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದರು. ಈ ಮೂಲಕ ದೇಶಾದ್ಯಂತ ಸಾವಿರಾರು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ.

































