ನವದೆಹಲಿ : ಯುಪಿಎಸ್ ಸಿ ಪರೀಕ್ಷಾ ಸಾಧಕರಾದ ಮಹಿಳಾ ಐಎಎಸ್ ಅಧಿಕಾರಿ ಪೂಜಾ ಗುಪ್ತಾ ಅವರು ವೈದ್ಯೆಯಾದ ಈಕೆ ಛಲದಿಂದ ಓದಿ ಯುಪಿಎಸ್ ಸಿ ಪಾಸ್ ಮಾಡಿ ಮೊದಲಿಗೆ ಐಪಿಎಸ್ ಅಧಿಕಾರಿಯಾದರು. ತೃಪ್ತರಾಗದೆ ಮತ್ತೆ ಪರೀಕ್ಷೆ ಬರೆದು ಐಎಎಸ್ ಹುದ್ದೆಯನ್ನು ತಮ್ಮದಾಗಿಸಿಕೊಂಡರು. ಅವರ ಒಂದು ಸಕ್ಸಸ್ ಸ್ಟೋರಿ ಇಲ್ಲಿದೆ.
ಪೂಜಾ ಗುಪ್ತಾ ದೆಹಲಿಯ ನಿವಾಸಿ. ಓದು ಮುಗಿಸಿ ಐಎಎಸ್ ಅಧಿಕಾರಿಯಾಗಬೇಕು ಎಂದು ಶಾಲೆಯಲ್ಲೇ ನಿರ್ಧರಿಸಿದ್ದರು. ಅವರ ಈ ಗುರಿಯ ಹಿಂದೆ ಹಲವು ಕಾರಣಗಳಿದ್ದವು. ಪೂಜಾ ಅವರ ತಾಯಿ ರೇಖಾ ಗುಪ್ತಾ ದೆಹಲಿ ಪೊಲೀಸ್ ನಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್. ಅವರ ಸಮವಸ್ತ್ರವು ಪೂಜಾಗೆ ಸರ್ಕಾರಿ ನೌಕರಿಯ ಜವಾಬ್ದಾರಿಗಳ ಬಗ್ಗೆ ಸ್ಫೂರ್ತಿ ನೀಡುತ್ತಿತ್ತು. ಪೂಜಾ ಗುಪ್ತಾ ಅವರ ತಾತ ಕೂಡ ಮೊಮ್ಮಗಳು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು.
ಪೂಜಾ ಸೆಕೆಂಡ್ ಪಿಯು ಬಳಿಕ ESIC ಡೆಂಟಲ್ ಕಾಲೇಜಿನಿಂದ ಪದವಿ ಪಡೆದರು. ವೈದ್ಯಕೀಯ ಅಧ್ಯಯನದ ಜೊತೆಗೆ ಪೂಜಾ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದರಲ್ಲಿ 147ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾದರು.
2018 ರಲ್ಲಿ IPS ಆದ ನಂತರವೂ ಪೂಜಾ 2020 ರಲ್ಲಿ ಮತ್ತೆ UPSC ಪರೀಕ್ಷೆಯನ್ನು ನೀಡಿದರು. ಅವರು ತಮ್ಮ ಐಚ್ಛಿಕ ವಿಷಯವಾದ ಮಾನವಶಾಸ್ತ್ರವನ್ನು ತೆಗೆದುಕೊಂಡಿದ್ದರು. ಕೊನೆಗೆ 2020ರಲ್ಲಿ ಪರೀಕ್ಷೆ ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾದರು.