ಅಹ್ಮದಾಬಾದ್ : ರೌಡಿಯೊಬ್ಬನಿಗಾಗಿ ಐಎಎಸ್ ಗಂಡನನ್ನು ಬಿಟ್ಟು ಹೋಗಿದ್ದ ಮಹಿಳೆ ಈಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುಜರಾತ್ನ ಐಎಎಸ್ ಅಧಿಕಾರಿ ರಜನೀತ್ ಕುಮಾರ್ ಎಂಬವವರ ಮಾಜಿ ಪತ್ನಿ ಸೂರ್ಯ.ಜೆ. ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡವಳು.
ಈಕೆ ತನ್ನ ತವರು ತಮಿಳುನಾಡಿನ ಗ್ಯಾಂಗ್ಸ್ಟರ್ ಒಬ್ಬನನ್ನು ಪ್ರೀತಿಸುತ್ತಿದ್ದು, 9 ತಿಂಗಳ ಹಿಂದೆ ಐಎಎಸ್ ಗಂಡನನ್ನು ಬಿಟ್ಟು ರೌಡಿ ಜೊತೆ ಓಡಿಹೋಗಿದ್ದಳಂತೆ… ಇದೀಗ ಇದ್ದಕ್ಕಿದ್ದಂತೆ ಮಾಜಿ ಗಂಡ, ಗುಜರಾತ್ನ ಇಲೆಕ್ಟ್ರಸಿಟಿ ರೆಗ್ಯುಲೆಟರ್ ಕಮಿಷನ್ (GERC) ಕಾರ್ಯದರ್ಶಿ ಆಗಿರುವ ರಜನೀತ್ ಕುಮಾರ್ ಗಾಂಧಿನಗರದ ನಿವಾಸ ಮುಂದೆ ಕಾಣಿಸಿಕೊಂಡಿದ್ದಳು.
ಆಕೆಯನ್ನು ಮನೆಯೊಳಗೆ ಸೇರಿಸಿಕೊಳ್ಳಲು ಅಧಿಕಾರಿ ರಜನೀತ್ ನಿರಾಕರಿಸಿದ್ದಾರೆ.. ಇದರಿಂದಾಗಿ ಸೂರ್ಯ ಜೆ ಅಲ್ಲೇ ದಾರಿಯಲ್ಲಿ ವಿಷ ಸೇವಿಸಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಸೂರ್ಯ.ಜೆ. ತಮಿಳುನಾಡಿನ ಹೈಕೋರ್ಟ್ ಮಹಾರಾಜ ಎಂದು ಕರೆಯಲ್ಪಡುವ ಸ್ಥಳೀಯ ರೌಡಿಯನ್ನ ಪ್ರೀತಿಸುತ್ತಿದ್ದಳು. ಆತನೊಂದಿಗೆ ಓಡಿಹೋಗಿದ್ದಳು.
ಆ ಗ್ಯಾಂಗ್ಸ್ಟರ್ ಮಕ್ಕಳ ಅಪಹರಣದಲ್ಲಿ ಕುಖ್ಯಾತಿ ಗಳಿಸಿದ್ದ.ಇತ್ತೀಚೆಗೆ ಮಗುವೊಂದರ ಅಪಹರಣವಾಗಿತ್ತು.. ಆ ಪ್ರಕರಣದಲ್ಲಿ ಪ್ರಿಯಕರನ ಜೊತೆ ಸೂರ್ಯ ಕೆ. ಕೂಡಾ ಆರೋಪಿಯಾಗಿದ್ದಳು.. ಹೀಗಾಗಿ ಪೊಲೀಸರು ಆಕೆಗಾಗಿ ಹುಡುಕಾಡುತ್ತಿದ್ದರು.. ಹೀಗಾಗಿ, ಆಕೆ ಮಾಜಿ ಗಂಡ ಬಳಿಗೆ ಹೋಗಿದ್ದಳು. ಆದ್ರೆ ಐಎಸ್ಎಸ್ ಅಧಿಕಾರಿಯಾಗಿರುವ ಮಾಜಿ ಗಂಡ ಮನೆಗೆ ಕರೆದುಕೊಳ್ಳಲು ನಿರಾಕರಿಸಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
































