ಬೆಂಗಳೂರು: ವೃದ್ಧ ತಂದೆ, ತಾಯಿಯನ್ನು ಬಿಟ್ಟು ಹೋಗುತ್ತಿರುವ ಪ್ರಕರಣಗಳು ಜಾಸ್ತಿ ಆಗುತ್ತಿದೆ. ಹೀಗಾಗಿ ತಂದೆ-ತಾಯಿ ಬಿಟ್ಟು ಹೋದರೆ ಆಸ್ತಿ ಸಿಗಲ್ಲ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಬೆಳಗಾವಿ ಜಿಲ್ಲೆ ಒಂದರಲ್ಲಿಯೇ 150 ಪ್ರಕರಣಗಳು ಇವೆ. ಇದರಲ್ಲಿ 70 ಪ್ರಕರಣಗಳಲ್ಲಿ ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗಾಗಿ ಮಕ್ಕಳ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಿದ್ದೇವೆ. ಜೊತೆಗೆ ವೃದ್ಧ ತಂದೆ, ತಾಯಿಯನ್ನು ಬಿಟ್ಟು ಹೋಗುತ್ತಿರುವ ಪ್ರಕರಣಗಳು ಜಾಸ್ತಿ ಆಗುತ್ತಿದೆ. ಈ ಹಿನ್ನೆಲೆ ಮಕ್ಕಳ ಆಸ್ತಿ, ವಿಲ್ ರದ್ದು ಮಾಡಲಾಗುವುದು ಎಂದರು.
ನಾನು ಮನವಿ ಮಾಡುತ್ತಿದ್ದೇನೆ. ನಿಮ್ಮ ತಂದೆ, ತಾಯಿಯನ್ನ ಆಸ್ಪತ್ರೆಗಳಲ್ಲಿ ಬಿಟ್ಟು ಹೋಗಬೇಡಿ. ಕೇಂದ್ರ ಸರ್ಕಾರದ ಕಾನೂನು ರಾಜ್ಯದಲ್ಲೂ ಜಾರಿ ಮಾಡುತ್ತೇವೆ. ಪೋಷಕರು, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯ ಮೂಲಕ ಆಸ್ತಿ, ವಿಲ್ ರದ್ದು ಮಾಡಬಹುದು. ರಾಜ್ಯದ ಎಲ್ಲ ಕಡೆಗಳಲ್ಲೂ ಮಾಹಿತಿ ಕಲೆ ಹಾಕಲು ಸೂಚಿಸಿದ್ದೇನೆ. ಮುಲಾಜಿಲ್ಲದೆ ಕ್ರಮ ಆಗಲಿದೆ. ಅಮಾನವೀಯವಾಗಿ ತಂದೆ, ತಾಯಿಯನ್ನ ಬಿಟ್ಟು ಹೋಗಬೇಡಿ. ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾನೂನು ಬೇಕಿಲ್ಲ. ಈಗಾಗಲೇ ಕೇಂದ್ರ ಸರ್ಕಾರದ ಕಾನೂನು ಇದೆ. ಅದರ ಮೂಲಕವೇ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದರು.