ಚಿತ್ರದುರ್ಗ : ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿ ಸಂಬಂಧ ಈ ಕಾಲಾಹರಣದ ನೀತಿಯನ್ನು ಪಕ್ಕಕ್ಕೆ ಇಟ್ಟು ತಕ್ಷಣ ಜಾರಿ ಮಾಡಬೇಕು. ಆಗಸ್ಟ್ 19ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳಮೀಸಲಾತಿ ಘೋಷಿಸಬೇಕು. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ರಾಜ್ಯದೆಲ್ಲೆಡೆ ತಮಟೆ ಚಳವಳಿ ನೆಡೆಯಲಿದೆ. ಇಷ್ಟಾಗಿಯೂ ಆ 19ರ ಸಂಪುಟ ಸಭೆಯಲ್ಲಿ ಮತ್ತೊಂದು ಸಮಿತಿ ರಚಿಸಲು ಮುಂದಾದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾತ್ತದೆ ಎಂದು ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆಯನ್ನು ಸ್ವಾಭಿಮಾನಿ ಮಾದಿಗರ ಮಹಾ ಸಭಾ ನೀಡಿದೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವಾಭಿಮಾನಿ ಮಾದಿಗರ ಮಹಾ ಸಭಾದ ಸಂಚಾಲಕರಾದ ಜಿ.ಎಚ್.ಮೋಹನ್, ಟಿಪ್ಪಣಿ ನ್ಯಾ ನಾಗಮೋಹನ್ ದೀಸ್ ವರದಿ ಸಲ್ಲಿಸಿದ ತರುವಾಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಆಗಸ್ಟ್ 19ಕ್ಕೆ ಮುಂದೆ ಹಾಕಿರುವುದು ಒಳ ಮೀಸಲಾತಿ ವಿರೋಧಿಗಳಿಗೆ ಸರ್ಕಾರದ ಮೇಲೆ ದಾವಣೆ ಮಾಡಲು ಸಮಯಾವಾಕಾಶ ಕೊಟ್ಟಂತಾಗಿದೆ. ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸುವುದು ಮಾದಿಗೆ ಸಮಾಜದ ಬೇಡಿಕೆಯಾಗಿರಲಿಲ್ಲ. ಆಯೋಗದ ಕಾರ್ಯಕಲಾಪದಲ್ಲಿ ಒಂದೇ ಅಧಿಕಾರಿಗಳೇ ಕಾರ್ಯನಿರ್ವಹಿಸಿದ್ದಾರೆ. ಈಗ ಅದೇ ಜನ ವರದಿಯ ಬಗ್ಗೆ ತಕರಾರು ತೆಗೆದು ಸಂಪುಟ ಉಪಸಮಿತಿ ರಚಿಸುವ ಹುನ್ನಾರದ ಹಿಂದೆ ಸಕ್ರಿಯರಾಗಿದ್ದಾರೆ. ಇದು ಒಳ ಮೀಸಲಾತಿ ಕುರಿತಾದ ಕಾಂಗ್ರೆಸ್ಸಿನ ವಿಳಂಬ ನೀತಿಯಾಗಿದ್ದು ನಿಧಾನ ದ್ರೋಹದ ಮುಂದುವರಿದ ಭಾಗವಾಗಿದೆ. ಎಂದರು.
ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಲ್ಲಿ ಆದಿಕರ್ನಾಟಕ (ಜನಸಂಖ್ಯೆ:1.47.199).ಆದಿದ್ರಾವಿಡ (ಜನಸಂಖ್ಯೆ: 3.20.641).ಆದಿಆಂಧ್ರ (ಜನಸಂಖ್ಯೆ: 7,114) ಇದನ್ನು ‘ಇ’ ಪ್ರವರ್ಗದಲ್ಲಿ ಗುರುತಿಸಲಾಗಿದೆ. ಈಗ ‘ಅ’ ಗುಂಪಿಗೆ ಇಡಿಯಾಗಿ ‘ಇ’ ಗುಂಪಿಗೆ ಸೇರಿಸುವ ಹುನ್ನಾರ ನೆಡದಿದೆ. ‘ಇ’ ಗುಂಪಿನಲ್ಲಿ ಮೂಲ ಜಾತಿಹೇಳದೆ ಆದಿದ್ರಾವಿಡ ಎಂದು ಗುರುತಿಸಿಕೊಂಡವರು 3.20.641 ಜನ ಇದ್ದಾರೆ. ಇವರಲ್ಲಿ ಬಹುತೇಕ ಜನ ಪೌರಕಾರ್ಮಿಕ ವೃತ್ತಿಯಲ್ಲಿ ಇದ್ದು. ಮಾದಿಗ ಸಂಬಂಧಿತ ಜಾತಿಗಳವರಾಗಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಒಳಮೀಸಲಾತಿ ಜಾರಿ ಆಗುವವರೆಗೆ ಉದ್ಯೋಗ ಅವಕಾಶಗಳು ಬಂದ್ ಆಗಿರುವುದರಿಂದ ಎಸ್ಸಿ ಅಲ್ಲದ ಸಮಾಜಗಳೂ ಸಿದ್ಧರಾಮಯ್ಯನ ವಿಳಂಬ ಧೋರಣೆಯ ಬಗ್ಗೆ ರೋಸಿ ಹೋಗಿದ್ದಾರೆ. ಉದ್ಯೋಗ ಅವಕಾಶಗಳನ್ನು ನಿಲ್ಲಿಸಿ, ಎಲ್ಲ ಮೂರು ಗುಂಪಿನ ದಲಿತರನ್ನು ಬೀದಿಗೆ ಬರುವಂತೆ ಮಾಡಿರುವುದು ಸಿದ್ದರಾಮಯ್ಯನವರ ಸಾಧನೆಯಾಗಿದೆ. ಸಿದ್ದರಾಮಯ್ಯನವರು ಆಗಸ್ಟ್ 19ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳಮೀಸಲಾತಿ ಘೋಷಿಸಬೇಕು. ಇಷ್ಟಾಗಿಯೂ ಆ 19ರ ಸಂಪುಟ ಸಭೆಯಲ್ಲಿ ಮತ್ತೊಂದು ಸಮಿತಿ ರಚಿಸಲು ಮುಂದಾದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಯಿತು.
ಚಿತ್ರದುರ್ಗ ತಾ.ಪಂ. ಮಾಜಿ ಅಧ್ಯಕ್ಷರಾದ ಜಯ್ಯಪ್ಪ ಮಾತನಾಡಿ, ಸರ್ಕಾರದ ವಿಳಂಬ ನೀತಿಯ ಸಮಾಯಾವಕಾಶ ಬಳಸಿಕೊಂಡು ನಮ್ಮ ಸೋದರ ಗುಂಪಿನವರು ಬಲಾಬಲಾ ಪ್ರದರ್ಶನಕ್ಕೆ ಇಳಿದಿರುವು ಒಳ್ಳೆಯ ಬೆಳವಣಿಗೆಯಲ್ಲ, ಸರ್ಕಾರದಲ್ಲಿ ಪ್ರಭಾವಿ ಸಚಿವರೂ ತಮ್ಮವರೇ ಇದ್ದರೂ ಅನಗತ್ಯವಾಗಿ ಬೀದಿಗಿಳಿದು ದ್ವೇಷ ಭಾಷಣ ಮಾಡುವುದು ಪರಸ್ಪರ ಅಂತರ ಹೆಚ್ಚು ಮಾಡುತ್ತದೆ. ಈ ಬೆಳವಣಿಗೆಗಳ ಹಿಂದೆ ಇದ್ದಾರೆಂಬ ಮಾಹಿತಿಗಳು ಬಂದಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಸಿದ್ದರಾಮಯ್ಯನವರು 2013 ರಿಂದ 2018ರ ವರೆಗೆ ಮುಖ್ಯಮಂತ್ರಿ ಆದಾಗಲೂ ಇದೇ ಏಳಂಬ ದ್ರೋಹದ ಚಾಳಿ ನಡೆಸಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಸಿದ್ಧರಾಮಯ್ಯನವರು ‘ಮೂರು’ ಸಚಿವರ ಕೈಗೊಂಬೆಯಾಗಿದ್ದಾರೆ ಎಂಬುದು. ಸಿದ್ಧರಾಮಯ್ಯನವರು ಸ್ವತಂತ್ರವಾಗಿ ಒಂದು ಸಚಿವ ಸಂಪುಟ ಸಭೆ ನೆಡೆಸುವಷ್ಟೂ ಧೈರ್ಯ. ಹಿಡಿತ ಉಳಿಸಿಕೊಂಡಿಲ್ಲ. ಅಗಸ್ಟ್ 1ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ವರ್ಷ ಕಳೆಯಿತು ಒಂದು ಹೆಜ್ಜೆಯೂ ಮುಂದೆ ಹಾಕದೆ ಯಾರದೋ ಆಣತಿಗೆ ತಕ್ಕಂತೆ ಸಿದ್ಧರಾಮಯ್ಯ ನಿರ್ಧಾರ ತೆಗೆದುಕೊಳ್ಳುತ್ತಿ ರುವುದನ್ನು ನೋಡಿದರೆ ನ್ಯಾ ನಾಗಮೋಹನ್ ದಾಸ್ ವರದಿಗೂ, ನ್ಯಾ. ಕಾಂತರಾಜ್ ವರದಿಗೆ ಆದ ಗತಿಯೇ ಆಗುತ್ತವೆಯೇನೊ ಎಂಬ ಆತಂಕ ನಮ್ಮದು ಎಂದಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಸಂಯೋಜಕ) ರಾಜ್ಯಾಧ್ಯಕ್ಷರಾದ ಹೆಚ್. ಮಹಾಂತೇಶ ಮಾತನಾಡಿ, ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯನ್ನು ಮುಂದೆ ಹಾಕಿ, ಎಲ್ಲ ಜಾತಿ, ಉಪಜಾತಿಗಳವರನ್ನು ಬೀದಿಗೆ ಇಳಿಸಿ, ಗೊಂದಲ ಹುಟ್ಟುಹಾಕಲು ಸಂಪುಟದ ಸದಸ್ಯರೇ ಮುಂದಾಗಿದ್ದರೂ ಸಿದ್ದರಾಮಯ್ಯನವರೂ ಏನೂ ಮಾಡುತ್ತಿಲ್ಲ. ನಮ್ಮದು ಸಿದ್ದರಾಮಯ್ಯನವರು. ಮೊದಲ ಸಚಿವ ಸಂಪ್ದಲ್ಲಿಯೇ ಒಳಮೀಸಲಾತಿಯ ನಿರ್ಣಯ ಘೋಷಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. 2 ವರ್ಷ 3 ತಿಂಗಳಾಯಿತು. ಈಗ ಪರಿಸ್ಥಿತಿ ಎಷ್ಟು ಬಿಗಾಡಿಯಿಸಿದೆ ಎಂದರೆ ಸಿದ್ದರಾಮಯ್ಯನವರಿಗೆ ಸಚಿವ ಸಂಪುಟ ನಡೆಸಲೂ ಸಾಧ್ಯವಾಗುತ್ತಿಲ್ಲ. ಸಿದ್ಧರಾಮಯ್ಯ ಕಾಂತರಾಜ್ ಆಯೋಗದ ಹೆಸರಲ್ಲಿ 165 ಕೋಟಿ ಮುಳುಗಿಸಿದರು. ಈಗ ನಾಗಮೋಹನ್ ದಾಸ್ ವರದಿಯನ್ನು ತಮ್ಮ ಮೂಗಿನ ನೇರಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಹುನ್ನಾರ ನೆಡೆದಿದೆ. ಇವೆಲ್ಲವನ್ನು ಆಧ್ಯಯನ ಮಾಡಿಯೇ ಮಾಧುಸ್ವಾಮಿ ಸಮಿತಿ ಬಲ ಗುಂಪಿಗೆ 5.5%, ಬೋವಿ, ಬಂಜಾರ ಗುಂಪಿಗೆ 4.5% ಮೀಸಲಾತಿ ನಿಗದಿಪಡಿಸಲಾಗಿತ್ತು. ಬಿಗುಮಾನ ಬಿಟ್ಟು ರಾಜ್ಯ ಸರ್ಕಾರ ಮಾಧುಸ್ವಾಮಿ ವರದಿಯನ್ನೇ ಜಾರಿ ಮಾಡುವುದು ಒಳ್ಳೆಯದು. ಇಲ್ಲವಾದರೆ ಎಲ್ಲ ಆಯೋಗಗಳು ಹೇಳುವಂತೆ. ಮಾದಿಗರಿಗೆ 6% ಪ್ರತ್ಯೇಕ ಮೀಸಲಾತಿ ಕೊಟ್ಟು ಉಳಿದಿದ್ದನ್ನು ನಿಧಾನಗತಿಯಲ್ಲಿ ಮಾಡಬಹುದಾಗಿದೆ ಎಂದಿದ್ದಾರೆ.
ಗೋಷ್ಟಿಯಲ್ಲಿ ಚನ್ನಗಾನಹಳ್ಳಿ ಮಲ್ಲೇಶ್, ರುದ್ರಮುನಿ, ಪ್ರಹ್ಲಾದ್ ಬಸಣ್ಣ, ತಿಪ್ಪೇಸ್ವಾಮಿ, ಪರಶುರಾಮ್, ಕೃಷ್ಣಮೂರ್ತಿ, ಮಲ್ಲಿಕಾರ್ಜನ್, ರವಿಕುಮಾರ್, ಬಸಮ್ಮ, ಕೆಂಚಪ್ಪ, ಕಲ್ಲೇಶ್, ಮಂಜುನಾಥ್, ಗೀರೀಶ್ ನರಸಿಂಹಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.