ದೆಹಲಿ: ಹೌದು ನಿಮ್ಮ ಮೊಬೈಲ್ ನ ಪ್ಲೇಸ್ಟೋರ್‌ನಲ್ಲಿರುವ 2 ಆ್ಯಪ್ಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಿ ಚೀನಾದ ಕಂಪನಿಗಳಿಗೆ ರವಾನಿಸುತ್ತಿವೆ ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ಪ್ರಾಡಿಯೊ ಬಹಿರಂಗಪಡಿಸಿದೆ.
ಫೈಲ್ ಅಂಡ್ ಡೇಟಾ ರಿಕವರಿ’, ‘ಫೈಲ್ ಮ್ಯಾನೇಜರ್’ ಆ್ಯಪ್ಗಳು ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್, ಸ್ಥಳ, ದೇಶದ ಕೋಡ್, ನೆಟ್‌ವರ್ಕ್ ಒದಗಿಸುವವರ ಹೆಸರು, ನೆಟ್‌ವರ್ಕ್ ಕೋಡ್, ಫೋನ್ ಉತ್ಪಾದನಾ ಕಂಪನಿಯಂತಹ ವಿವರಗಳನ್ನು ಸಂಗ್ರಹಿಸುತ್ತವೆ ಎಂದಿದೆ. ಕೂಡಲೇ ಅವುಗಳನ್ನು ಡಿಲೀಟ್ ಮಾಡುವಂತೆ ಎಚ್ಚರಿಕೆ ನೀಡಿದೆ.