ಮಹಿಳೆಯರು ಸೌಂದರ್ಯಪ್ರಿಯರು. ತಲೆ ಕೂದಲು ಹಾಗೂ ಮುಖದ ಕುರಿತಾಗಿ ಹೆಚವ್ಚಿನ ಕಾಳಜಿ ವಹಿಸುತ್ತಾರೆ. ಮನೆಯಲ್ಲಿ ಸಿಗುವ ಪದಾರ್ಥಗಳಿಂದ ನೈಟ್ ಸೀರಮ್ ತಯಾರಿಸಬಹುದು.
ನೈಟ್ ಸೀರಮ್ ಮುಖಕ್ಕೆ ಹೊಳಪನ್ನು ನೀಡುವುದರ ಜೊತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಆವಕಾಡೊ ಎಣ್ಣೆಯಲ್ಲಿ ವಿಟಮಿನ್ A, D, E ಗಳು ಹೇರಳವಾಗಿವೆ. ಇದು ಚಳಿಗಾಲದಲ್ಲಿ ಒಣ ಚರ್ಮವನ್ನು ಆರ್ದ್ರವಾಗಿರಿಸುತ್ತದೆ.
ಜೇನುತುಪ್ಪ ಕೂಡ ಚರ್ಮವನ್ನು ಆರ್ದ್ರವಾಗಿರಿಸುತ್ತದೆ. ಬೇಕಾಗುವ ಪದಾರ್ಥಗಳು: 1 ಚಮಚ ಆವಕಾಡೊ ಎಣ್ಣೆ, 1 ಚಮಚ ಜೇನುತುಪ್ಪ, 1 ಚಮಚ ಅಲವೆರ ಜೆಲ್ ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಆವಕಾಡೊ ಎಣ್ಣೆ, ಜೇನುತುಪ್ಪ ಮತ್ತು ಅಲವೆರ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಬಾಟಲಿಯಲ್ಲಿ ಸಂಗ್ರಹಿಸಿ ರಾತ್ರಿ ಬಳಸಿ.
































