ಆಸಿಡಿಟಿ ತೊಂದರೆ ಈಗ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಮುಕ್ತಿ ಪಡೆಯಲು ಬಗೆ ಬಗೆಯ ಔಷಧಿ ಸೇವಿಸಿದ್ರೂ ಪ್ರಯೋಜವಾಗ್ತಿಲ್ಲ.
ಹಾಗಾಗಿ ಇದಕ್ಕೆ ಕಾರಣ ಮತ್ತು ಸುಲಭವಾದ ಪರಿಹಾರ ಎರಡನ್ನೂ ನೀವು ತಿಳಿದುಕೊಳ್ಳಬೇಕು. ನೀವು ಯಾವುದೇ ಆಹಾರ ಅಥವಾ ನೀರನ್ನು ಸೇವಿಸಿದಾಗ, ಸ್ವಲ್ಪ ಪ್ರಮಾಣದ ಗಾಳಿಯು ನಿಮ್ಮ ದೇಹವನ್ನು ಪ್ರವೇಶಿಸುತ್ತದೆ.
ಒಬ್ಬ ಸಾಮಾನ್ಯ ವ್ಯಕ್ತಿಯ ಹೊಟ್ಟೆಯಲ್ಲಿ ಪ್ರತಿದಿನ 2 ಗ್ಲಾಸ್ ನಷ್ಟು ಗ್ಯಾಸ್ ತುಂಬಿಕೊಳ್ಳುವುದು ಸಹಜ. ಆದ್ರೆ ಇದು ಅತಿಯಾದಾಗ ಬೇರೆ ಬೇರೆ ತೆರನಾದ ತೊಂದರೆಗಳು ಶುರುವಾಗುತ್ತವೆ. ಕೆಲವೊಮ್ಮೆ ಇದು ಕರುಳಿನ ಕ್ಯಾನ್ಸರ್ ಸಂಕೇತವೂ ಆಗಿರಬಹುದು.ನೀವು ಅತಿಯಾದ ಆಸಿಡಿಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಉಗುರು ಬೆಚ್ಚಗಿನ ನೀರು ಕುಡಿಯಿರಿ. ಅಥವಾ ಗ್ರೀನ್ ಟೀ ಕೂಡ ಸೇವಿಸಬಹುದು. ಶುಂಠಿ ಮತ್ತು ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡು ಕುಡಿಯಿರಿ.
ಸೋಂಪು ಮತ್ತು ಆಪಲ್ ಸೈಡರ್ ವಿನೆಗರ್ ಸೇವನೆಯಿಂದ ಆಸಿಡಿಟಿ ನಿವಾರಣೆಯಾಗುತ್ತದೆ. ಹೊಟ್ಟೆಯ ಗ್ಯಾಸ್ ಅಥವಾ ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಪಡೆಯಲು ತಂಪು ಪಾನೀಯ, ಚಹಾ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ.
ಈರುಳ್ಳಿ, ಆಲೂಗಡ್ಡೆ, ಪಾಲಕ್ ನಂತಹ ಕೆಲವು ತರಕಾರಿಗಳ ಸೇವನೆಯೂ ಬೇಡ, ಇವುಗಳಿಂದ ಹೊಟ್ಟೆಯಲ್ಲಿ ಹೆಚ್ಚು ಅನಿಲ ರೂಪುಗೊಳ್ಳುತ್ತದೆ. ಊಟ ಮಾಡುವಾಗ ಮಾತನಾಡಬೇಡಿ, ಇದರಿಂದ ಗಾಳಿ ದೇಹಕ್ಕೆ ಹೋಗುವುದನ್ನು ತಡೆಯಬಹುದು. ಜಂಕ್ ಫುಡ್ ಮತ್ತು ಹೆಚ್ಚು ಮಸಾಲೆ ಇರುವ ಪದಾರ್ಥಗಳು ಆಸಿಡಿಟಿಗೆ ಪ್ರಮುಖ ಕಾರಣವಾಗುತ್ತವೆ. ಆದ್ದರಿಂದ, ಅವುಗಳನ್ನು ತಿನ್ನುವುದನ್ನು ಸಹ ತಪ್ಪಿಸಬೇಕು. ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಹೆಚ್ಚಾದಾಗ ನೋವು ಮತ್ತು ಸೆಳೆತ ಶುರುವಾಗುತ್ತದೆ.
ಇದರಿಂದಾಗಿ ಕ್ರಿಯಾಶೀಲತೆಯಿಂದ ಇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆದಷ್ಟು ಬೇಗ ಗ್ಯಾಸ್ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಉತ್ತಮ.