ಭಾರತದಲ್ಲಿ ಆಧಾರ ಕಾರ್ಡ್ ಎನ್ನುವುದು ಪ್ರತಿಯೊಬ್ಬ ನಾಗರಿಕರ ಅತ್ಯಗತ್ಯ ದಾಖಲೆಯಾಗಿ ಗುರುತಿಸಿಕೊಂಡಿದೆ. ನಮ್ಮ ಗುರುತಿಗೆ ಕಡ್ಡಾಯ ಗುರುತಿನ ಪತ್ರವಾಗಿದೆ . ಸರ್ಕಾರದ ಯೋಜನೆಗಳು ಹಣಕಾಸಿನ ಸೇವೆಗಳು ಇವೆಲ್ಲವೂ ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಅತ್ಯಗತ್ಯ ಹಾಗೂ ಆಧಾರ್ ಕಾರ್ಡ್ ಕೂಡ.
2025 ರಿಂದ ಭಾರತ ಸರ್ಕಾರ ಐದು ಹೊಸ ರೂಲ್ಸ್ಗಳನ್ನು ಆಧಾರ್ಗೆ ಸಂಬಂಧಿಸಿದಂತೆ ತಂದಿದೆ. ಈ ಐದು ನಿಯಮಗಳು ನೇರವಾಗಿ ನಿಮ್ಮ ಬದುಕಿನ ಮೇಲೆ ಪರಿಣಣಾಮ ಬೀರಲಿದೆ. ಹೀಗಾಗಿ ಈ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಅವುಗಳ ಬಗ್ಗೆ ಇಲ್ಲಿ ನಾವು ನಿಮಗೆ ಮಾಹಿತಿ ನೀಡುತ್ತೇವೆ.
1. ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಆಧಾರ ಕಾರ್ಡ್ನ್ನು ನಿಮ್ಮ ಹಲವು ದಾಖಲೆಗಳಿಗೆ ಲಿಂಕ್ ಮಾಡಿರಲೇಬೇಕು. ಈಗಾಗಲೇ ಪಾನ್ ಕಾರ್ಡ್ಗೆ ಹಾಗೂ ಆಧಾರ್ ಕಾರ್ಡ್ ಎರಡು ಲಿಂಕ್ ಆಗಬೇಕಾದ ಅವಧಿ ಮುಗಿದಿದೆ. ಸದ್ಯ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಕೂಡ ಲಿಂಕ್ ಆಗಿರಬೇಕು. ಸರ್ಕಾರದ ಯಾವುದೇ ಯೋಜನೆಗಳು ನಿಮ್ಮನ್ನು ತಲುಪಲು, ಸರ್ಕಾರದ ಯಾವುದೇ ಕೆಲಸ ಆಗಬೇಕಾದರೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗುವುದು ಕಡ್ಡಾಯ.
2. ಆಧಾರ್ ಕಾರ್ಡ್ ಅಪ್ಡೇಟ್ಗೆ ಡೆಡ್ಲೈನ್
ಇನ್ನು ನಿಮಗೆ ಸಂಬಂಧಿಸಿದ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯ. ಹೆಸರು, ವಿಳಾಸ,ಹುಟ್ಟಿದ ದಿನಾಂಕ ಇಲ್ಲವೇ ಉಳಿದ ಯಾವುದೇ ವಿವರಗಳನ್ನು ಅಪ್ಡೇಟ್ ಮಾಡಬೇಕಾದಲ್ಲಿ ಕೂಡಲೇ ಅಪ್ಡೇಟ್ ಮಾಡಬೇಕು. ಇದೆಲ್ಲದಕ್ಕೂ ಕೂಡ ಕೆಲವೇ ದಿನಗಳಲ್ಲಿ ಡೆಡ್ಲೈನ್ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಅದರೊಳಗೆ ನೀವು ಅಪ್ಡೇಟ್ ಮಾಡದೇ ಇದ್ದರೆ, ಸರ್ಕಾರದ ಸವಲತ್ತುಗಳು ನಿಮಗೆ ದೊರಕುವ ನಿಟ್ಟಿನಲ್ಲಿ ಸಮಸ್ಯೆಯುಂಟಾಗಬಹುದು
3. ಆಧಾರ್ ಕಾರ್ಡ್ ಇಲ್ಲದೇ ಯಾವುದೇ ಸರ್ಕಾರಿ ಸವಲತ್ತುಗಳಿಲ್ಲ
ಈಗಾಗಲೇ ಭಾರತ ಸರ್ಕಾರ ಒಂದು ಸ್ಪಷ್ಟ ನಿರ್ದೇಶನ ನೀಡಿದೆ. ಒಂದು ವೇಳೆ ನೀವು ಆಧಾರ್ ಕಾರ್ಡ್ ಸರಿಯಾಗಿ ವೆರಿಫೈಯ್ಡ್ ಆಗದೇ ಇದ್ದಲ್ಲಿ ಸರ್ಕಾರ ಯಾವುದೇ ಸೌಲಭ್ಯಗಳು ನಿಮಗೆ ಸಿಗುವುದಿಲ್ಲ. ಸರ್ಕಾರದ ಯಾವುದೇ ಸಬ್ಸಿಡಿಯಾಗಲಿ, ರೇಷನ್, ಎಲ್ಪಿಜಿ ಗ್ಯಾಸ್ ಕಲೆಕ್ಷನ್, ಪಿಂಚಣಿ ಇವೆಲ್ಲವೂ ಕೂಡ ಆಧಾರ್ದೊಂದಿಗೆ ವೆರಿಫಿಕೇಷನ್ ಆಗಿರಬೇಕು. ಒಂದು ವೇಳೆ ಆಗದೇ ಇದ್ದಲ್ಲಿ ಇಂತಹ ಯಾವ ಸೌಲಭ್ಯಗಳು ಕೂಡ ನಿಮಗೆ ಸಿಗುವುದಿಲ್ಲ. ಅದು ಮಾತ್ರವಲ್ಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಬ್ಯಾಂಕ್ ಅಕೌಂಟ್ ಜೊತೆ ಲಿಂಕ್ ಆಗಿರದೇ ಇದ್ದಲ್ಲಿ ನಿಮ್ಮ ವ್ಯವಹಾರಗಳ ಮೇಲೆಯೂ ಕೂಡ ದೊಡ್ಡ ಸಮಸ್ಯೆಯನ್ನು ಸೃಷ್ಟಿ ಮಾಡಲಿದೆ.
4. ಬಯೋಮೆಟ್ರಿಕ್ ಅಪ್ಡೇಟ್
ಫಿಂಗರ್ ಪ್ರಿಂಟ್ ಸೇರಿದಂತೆ ಐರೀಸ್ ಸ್ಕ್ಯಾನ್ನಿಂದ ಹಿಡಿದು ಎಲ್ಲವನ್ನೂ ಈ 2025ರಲ್ಲಿ ಅಪ್ಡೇಟ್ ಮಾಡುವಂತೆ ಸರ್ಕಾರ ಸೂಚಿಸಿದೆ. ಹೀಗಾಗಿ ಕೂಡಲೇ ಸಮೀಪವಿರುವ ಆಧಾರ್ ಸೆಂಟರ್ಗೆ ಹೋಗಿ ನಿಮ್ಮ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಂಡು ಬನ್ನಿ
5. ಆಧಾರ್ ಕಾರ್ಡ್ ದುರುಪಯೋಗಕ್ಕೆ ಕಠಿಣ ನಿಯಮ
ಆಧಾರ್ ಕಾರ್ಡ್ ಒಂದಲ್ಲ ಒಂದು ರೀತಿ ದುರುಪಯೋಗವಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ನ್ನು ಯಾರಾದರೂ ತಮ್ಮ ಲಾಭಕ್ಕೆ ದುರುಪಯೋಗ ಮಾಡಿಕೊಂಡಲ್ಲಿ ಅದು ಸ್ಪಷ್ಟವಾದಲ್ಲಿ ಯಾರ ಹೆಸರಿನ ಆಧಾರ್ ಕಾರ್ಡ್ ಇರುತ್ತದೆಯೋ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಇದು ನಿಮ್ಮ ಆಧಾರ್ನ್ನು ತಾತ್ಕಾಲಿಕವಾಗಿ ರದ್ದು ಮಾಡುವುದರಿಂದ ಹಿಡಿದು ಅನೇಕ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ