ಧೂಮಪಾನ, ರಾಸಾಯನಿಕಯುಕ್ತ ಲಿಪ್ ಬಾಮ್ ಹಚ್ಚುವುದರಿಂದ ತುಟಿಯ ಮೇಲಿನ ಭಾಗ ಕಪ್ಪಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ತುಟಿಗಳು ಕೆಂಪಾಗುವಂತೆ ಮಾಡಲು ಈ ಮನೆಮದ್ದನ್ನು ಬಳಸಿ.
1 ಚಮಚ ನಿಂಬೆ ರಸಕ್ಕೆ 1 ಚಮಚ ಸಕ್ಕರೆ ಬೆರೆಸಿ ತುಟಿಗಳ ಮೇಲೆ ನಿಧಾನವಾಗಿ ಉಜ್ಜಿ.
1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತುಟಿಗಳಿಗೆ ಹಚ್ಚಿ ರಾತ್ರಿಯಿಡಿ ಬಿಡಿ ಮರುದಿನ ಬೆಳಿಗ್ಗೆ ವಾಶ್ ಮಾಡಿ. ಇದನ್ನು ಪ್ರತಿದಿನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಅರಿಶಿಣ ಕೂಡ ಉತ್ತಮ ಮೆಲನಿನ್ ಪ್ರತಿರೋಧಕವಾಗಿದೆ. ಇದನ್ನು ನಿಮ್ಮ ಕಪ್ಪು ತುಟಿಗಳಿಗೆ ಮನೆಮದ್ದಾಗಿ ಬಳಸಬಹುದು. ಒಂದು ಸಣ್ಣ ಬಟ್ಟಲನ್ನು ತೆಗೆದುಕೊಂಡು ಮತ್ತು 1 ಚಮಚ ಹಾಲು ಮತ್ತು ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಪೇಸ್ಟ್ ಆಗಿಸಿಕೊಂಡು, ನಂತರ ಅದನ್ನು ನಿಮ್ಮ ತುಟಿಗಳಿಗೆ ಅನ್ವಯಿಸಿ, 5 ನಿಮಿಷಗಳ ಬಿಟ್ಟು ತುಟಿಗಳನ್ನು ತೊಳೆದುಕೊಳ್ಳಿ.