ಉತ್ತರಾಖಂಡ : UPSC 2021 ರಲ್ಲಿ ಗೀತಿಕಾ IFS ಅಧ್ಯಯನ ಮಾಡುವಾಗ ಏನು ಮಾಡಿದ್ದರು ಎಂಬುದನ್ನು ನಾವಿಲ್ಲಿ ತಿಳಿಯೋಣ.
ಐಎಫ್ಎಸ್ ಅಧಿಕಾರಿ ಗೀತಿಕಾ ಉತ್ತರಾಖಂಡದ ಪಿಥೋರ್ಗಢ್ ಜಿಲ್ಲೆಯ ಜುಲಾಘಾಟ್ ಪ್ರದೇಶದ ನಿವಾಸಿ. ಅವರು ದೆಹಲಿಯಲ್ಲಿ ಹೈಸ್ಕೂಲ್ ಮತ್ತು ನೈನಿತಾಲ್ನಲ್ಲಿ ಇಂಟರ್ಮೀಡಿಯೇಟ್ ಮುಗಿಸಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಗೀತಿಕಾ ಸಾಮಾಜಿಕ ಮಾಧ್ಯಮ ಮತ್ತು ಜನರಿಂದ ದೂರವಾಗಲು ಪ್ರಾರಂಭಿಸಿದ್ದರಂತೆ.
ಏಪ್ರಿಲ್ 2021 ರಲ್ಲಿ ವೈಟ್ಬೋರ್ಡ್ ಖರೀದಿಸಿ ಅದರ ಮೇಲೆ ತನ್ನ ಅಧ್ಯಯನದ ವೇಳಾಪಟ್ಟಿಯನ್ನು ಬರೆದು, ನಂತರ ಪ್ರಿಲಿಮ್ಸ್ 27 ಜೂನ್ 2021 ರಂದು ರೆಡಿ ಆಗಿದ್ದಾರೆ. ಅವರ ಪರೀಕ್ಷಾ ಕೇಂದ್ರ ದೆಹಲಿಯಲ್ಲಿತ್ತು. ಏಪ್ರಿಲ್ ಅಂತ್ಯದಲ್ಲಿ ದೆಹಲಿಗೆ ಬಂದಿದ್ದರು. ಆದರೆ ಪರೀಕ್ಷೆಯನ್ನು ಮುಂದೂಡಲಾಯಿತು
ವಿಶ್ರಾಂತಿ ಪಡೆಯಲು ಗೀತಿಕಾ ಮೇಣದಬತ್ತಿಗಳನ್ನು ಬಳಸುತ್ತಾರಂತೆ. ಅವರು ಮೇಣದಬತ್ತಿಗಳ ಬೆಳಕನ್ನು ಪ್ರೀತಿಸುತ್ತಿದ್ದರಂತೆ, ಅದು ಅವರಿಗೆ ಶಾಂತಿಯನ್ನು ನೀಡಿತ್ತಂತೆ. ತಯಾರಿಯ ಒತ್ತಡದ ಸಮಯದಲ್ಲಿ ಆಗಾಗ ಮೇಣದ ಬತ್ತಿ ಹಚ್ಚಿ ಸುಮ್ಮನೆ ಕೂರುತ್ತಿದ್ದರಂತೆ.
UPSC ಮುಖ್ಯ ಫಲಿತಾಂಶಗಳು 17 ಮಾರ್ಚ್ 2022 ರಲ್ಲಿ ಗೀತಿಕಾ ಆಯ್ಕೆಯಾದರು. ಅದರ ನಂತರ, UPSC ಅಂತಿಮ ಫಲಿತಾಂಶಗಳು 30ನೇ ಮೇ 2022 ರಂದು ಬಿಡುಗಡೆಯಾಯಿತು. ಅದರಲ್ಲಿ 239 ರ ರ್ಯಾಂಕ್ ಗಳಿಸಿ IFS ಅಧಿಕಾರಿಯಾದರು. ಒಟ್ಟಾರೆ ಪ್ರಿಲಿಮ್ಸ್ ಮತ್ತು ಮೇನ್ಸ್ಗೆ ಹೆಚ್ಚಿನ ಗಮನ ನೀಡಿ ಮೊದಲ ಪ್ರಯತ್ನದಲ್ಲಿಯೇ ಗೀತಿಕಾ ಸಾಧನೆ ಮಾಡಿದ್ದಾರೆ.