ಚಿತ್ರದುರ್ಗ: ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್ ಜನರಿಗೆ ಕಿರುಕುಳ ಕೊಡುವುದನ್ನ ಸಹಿಸಲ್ಲ ಈ ಘಟನೆ ಆಗಿ ಪೊಲೀಸರು ಕ್ರಮ ಕೈಗೊಳ್ಳದಿದ್ರೆ, ಪೊಲೀಸರ ವಿರುದ್ದ ಕಠಿಣ ಕ್ರಮ ಕೈಗೊಳ್ತೀನಿ ಅದರಲ್ಲಿ ಯಾವುದೇ ಮುಲಾಜಿಲ್ಲ ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ ಆಗಬೇಕು, ಅದನ್ನು ಕಠಿಣವಾಗಿ ಮಾಡ್ತೀವಿ. ಎಂದು ಐಜಿಪಿ ರವಿಕಾಂತೇಗೌಡ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನೂತನ ಐಜಿಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಚಿತ್ರದುರ್ಗ ಎಸ್ಪಿ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರ ಈಗಾಗಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳೋದಕ್ಕೆ ಪ್ರಾರಂಭಿಸಿದ್ದೇವೆಸೂಕ್ತ ಕ್ರಮ ಗೊಂಡು ಜೈಲಿಗೆ ಕಳುಹಿಸಲು ಸರ್ಕಾರ ಸೂಚಿಸಿದೆ ಕಿರುಕುಳ ಕೊಡುವವರ ವಿರುದ್ದ ಕಠಿಣ ಕ್ರಮಕ್ಕಾಗಿ ಸೂಚಿಸಲಾಗಿದೆ ಈ ಬಗ್ಗೆ ಸಾರ್ವಜನಿಕರು 112 ಗೆ ಕಾಲ್ ಮಾಡಿ ದೂರು ಸಲ್ಲಿಸಬಹುದು ಪೊಲೀಸ್ ಠಾಣೆ, ಕಂಟ್ರೋಲ್ ರೂಮ್ ಸೇರಿದಂತೆ ನಮ್ಮ ಅಧಿಕಾರಿಗಳನ್ನ ಸಂಪರ್ಕಿಸಬಹುದು ನನ್ನನ್ನು ಕೂಡ ಅವರು ಸಂಪರ್ಕ ಮಾಡಬಹುದು ಎಂದರು.
ಯಾವುದೇ ಕಾರಣಕ್ಕೂ ಡ್ರಗ್ಸ್ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಆಗಿಲ್ಲಗಾಂಜಾ ಸೇವನೆ ಮಾಡುವವರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ ಅವರ ಮೂಲಕವೇ ಮಾಹಿತಿ ಸಂಗ್ರಹಿಸಿ ಕಠಿಣ ಕ್ರಮ ಅವರೆಲ್ಲರಿಗೂ ಅರಿವು ಮೂಡಿಸುವ ಕೆಲಸ ಆಗ್ತಿದೆ ಡ್ರಗ್ಸ್ ಅನ್ನು ಹದಿಹರೆಯದವರು ತಗೊಳ್ತಾರೆ ಎಂದು ಹೇಳ್ತಾರೆ ನಮ್ಮ ಅಧಿಕಾರಿಗಳು ತಿಂಗಳಿಗೊಮ್ಮೆ ಕಾಲೇಜುಗಳಿಗೆ ಹೋಗಿ ಅಭಿಯಾನ ಮಾಡಬೇಕು ವಿಧ್ಯಾರ್ಥಿಗಳಿಗೆ ಅರಿವೂ ಮೂಡಿಸುವ ಕೆಲಸ ಮಾಡಿದ್ದೀವಿ ಅದನ್ನ ದೊಡ್ಡ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಮಾಡ್ತೀವಿ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆ ಐಸಿಹಾಸಿಕ ನಗರವಾಗಿ ಪ್ರಸಿದ್ದಿ ಪಡೆದಿದೆ ನಮ್ಮ ವ್ಯಾಪ್ತಿಯಲ್ಲಿ ಚಿತ್ರದುರ್ಗ ಜಿಲ್ಲೆ ಸೇರಿರುವುದು ಹೆಮ್ಮೆಯ ವಿಷಯ ಇಂತಹ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಹಿಂದೆ ಇದ್ದ ಅಧಿಕಾರಿಗಳು ಇದನ್ನ ಸಮರ್ಥವಾಗಿ ನಿಭಾಹಿಸಿದ್ದಾರೆ ಸರ್ಕಾರದ ಪ್ರಮುಖ ಉದ್ದೇಶ, ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸಬೇಕಿದೆ ಕಳೆದ ಅಧಿಕಾರಿಗಳು ಕೊಟ್ಟಿರೋ ಸೂಚನೆಯನ್ನ ಚರ್ಚಿಸಲು ಅಧಿಕಾರಗಳ ಸಭೆ ನಮ್ಮ ಇಲಾಖೆಯ ಘೋಷ ವಾಕ್ಯವೇ ಎಂದೆಂದಿಗೂ ನಾವು ನಿಮ್ಮೊಂದಿದೆ ಹಾಗಾಗಿ ನಾವು ಜನರೊಂದಿಗೆ ಇದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಈ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ ಸಭೆ ಮೂಲಕ ಅವರಿಗೆ ಸೂಚನೆ ಕೊಡುವ ಉದ್ದೇಶ ಇದಾಗಿದೆ ಎಂದು ತಿಳಿಸಿದರು.