ಮುಂಬೈ: ಬಾಲಿವುಡ್ ಬೆಡಗಿ ಇಲಿಯಾನಾ ಹೊಸ ವರ್ಷದಂದು ಫ್ಯಾನ್ಸ್ ಜೊತೆ ಹೊಸ ಸುದ್ದಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಶುಭಹಾರೈಸುವ ಭರದಲ್ಲಿ ಮತ್ತೆ ಇಲಿಯಾನಾ ಪ್ರೆಗ್ನೆಂಟ್ ಆದ್ರಾ? ಎಂಬ ಅನುಮಾನ ಎಲ್ಲರಲ್ಲಿ ಮೂಡಿದೆ. ಇದೀಗ ನಟಿಯ ಹೊಸ ಪೋಸ್ಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಇದೀಗ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ 2024 ಹೇಗಿತ್ತು? ಎಂಬ ಸಣ್ಣ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ಅದರಲ್ಲಿ ಗಮನ ಸೆಳೆದಿದ್ದು, ಅಕ್ಟೋಬರ್ ತಿಂಗಳು. ಪ್ರೆಗ್ನೆನ್ಸಿ ಪರೀಕ್ಷೆಯ ಕಿಟ್ ಹಿಡಿದು ಎಮೋಷನಲ್ ಆಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅವರು ಮತ್ತೆ ತಾಯಿಯಾಗಿದ್ದಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ.
2023ರಲ್ಲಿ ಮೈಕಲ್ ಡೋಲನ್ ಎಂಬುವರನ್ನು ನಟಿ ಮದುವೆಯಾದರು. ಕಳೆದ ವರ್ಷ ಚೊಚ್ಚಲ ಮಗುವನ್ನು ಬರಮಾಡಿಕೊಂಡರು. ಪತಿಯ ಪರಿಚಯದ ಬಗ್ಗೆ ಅವರು ಗೌಪ್ಯವಾಗಿಯೇ ಇಟ್ಟಿದ್ದಾರೆ.