ರಾಯ್ಪುರ: ದೇಶದ ಚುನಾವಣೆ ವ್ಯವಸ್ಥೆ ಹಾಗೂ ಸಂಪನ್ಮೂಲಗಳ ಮೇಲೆ ಅಕ್ರಮ ವಲಸೆಯಿಂದ ಹೊರೆ ಬೀಳುತ್ತಿದೆ. ಇದರಿಂದ ನಿರ್ವಹಿಸಲಾಗ ಪ್ರಮಾಣದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮಂಗಳವಾರ ಹೇಳಿದ್ದಾರೆ.
ರಾಯ್ಪುರದಲ್ಲಿ ನಡೆದ “ಉತ್ತಮ ಭಾರತವನ್ನು ನಿರ್ಮಿಸಲು ಕಲ್ಪನೆಗಳು” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಧನ್ಕರ್, ಎನ್ಐಟಿ ರಾಯ್ಪುರ, ಐಐಟಿ ಭಿಲಾಯ್ ಮತ್ತು ಐಐಎಂ ರಾಯ್ಪುರದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಮ್ಮ ದೇಶದಲ್ಲಿ ಲಕ್ಷಾಂತರ ಅಕ್ರಮ ವಲಸಿಗರು ಆಶ್ರಯ ಪಡೆದಿದ್ದಾರೆ.
ಇದು ಸಂಪನ್ಮೂಲಗಳು, ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣವನ್ನು ದುರ್ಬಲಗೊಳಿಸುತ್ತದೆ. ಈ ವಿಷಯವು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿದೆ ಮತ್ತು ಇದನ್ನು ತುರ್ತಾಗಿ ಪರಿಹರಿಸಬೇಕು” ಎಂದು ಧನಕರ್ ಹೇಳಿದರು. ರಾಷ್ಟ್ರೀಯ-ಮೊದಲ ರಾಜಕೀಯದ ಅಗತ್ಯವನ್ನು ಒತ್ತಾಯಿಸಿದರು.