ಲಕ್ನೋ: ಜನವರಿ ಮತ್ತು ಸೆಪ್ಟೆಂಬರ್ 2024ರ ನಡುವೆ ರಾಜ್ಯವು 47.61 ಕೋಟಿ ಪ್ರವಾಸಿಗರನ್ನು ಸೆಳೆದಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ರಾಜ್ಯದ ಪ್ರವಾಸಿ ತಾಣಗಳ ಪೈಕಿ ಅಯೋಧ್ಯೆಯು ಆಗ್ರಾದ ತಾಜ್ ಮಹಲ್ ಅನ್ನು ಹಿಂದಿಕ್ಕಿದೆ. ಅಯೋಧ್ಯೆಯು 13.55 ಕೋಟಿ ದೇಶೀಯ ಪ್ರವಾಸಿಗರನ್ನು ಮತ್ತು 3,153 ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಿತು. ಆಗ್ರಾಕ್ಕೆ 11.59 ಕೋಟಿ ದೇಶೀಯ ಮತ್ತು 9.24 ಲಕ್ಷ ಅಂತರಾಷ್ಟ್ರೀಯ ಪ್ರವಾಸಿಗರು ಸೇರಿದಂತೆ 12.51 ಕೋಟಿ ಪ್ರವಾಸಿಗರು ಬಂದಿದ್ದಾರೆ.
