ಬೆಂಗಳೂರು : ಜೆಡಿಎಸ್ ಕಚೇರಿ ಸಮೀಪದ ಮೈದಾನದಲ್ಲಿ ಬೆಂಕಿ ಅವಘಡ ಸಂಭವಿಸಿ, 100ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ಪೊಲೀಸರು ಜಪ್ತಿ ಮಾಡಿದ್ದ ವಾಹನಗಳನ್ನು ಶೇಷಾದ್ರಿಪುರಂ ಬಳಿ ಜಕ್ಕರಾಯನ ಕೆರೆ ಗ್ರೌಂಡ್ನಲ್ಲಿ ಪಾರ್ಕ್ ಮಾಡಿದ್ದರು.
ಬೆಳಗ್ಗೆ ಈ ಜಾಗದಲ್ಲಿ ಬೆಂಕಿ ಹರಡಿದ್ದು, ಐದು ಕಾರು, ಐದು ಆಟೋ, 50 ಕ್ಕೂ ಹೆಚ್ಚು ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಇನ್ನಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿರುವುದರಿಂದ, ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ.
ಮೈದಾನದಲ್ಲಿ ಹುಲ್ಲು ಮತ್ತು ಗಿಡಗಳು ಬೆಳೆಯುತ್ತಿದ್ದವು. ಇಂದು ಯಾರೋ ಸಿಗರೇಟ್ ಕಾಯ್ದುಕೊಂಡು ಬೆಂಕಿ ಕಡ್ಡಿ ಎಸೆದು ಹೋಗಿದ್ದರಿಂದ ಈ ಅಗ್ನಿ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
				
															
                    
                    
                    
                    































